ಮಮತಾ ಬ್ಯಾನರ್ಜಿ ಗಾಯದ ವರದಿ ಸಮಗ್ರವಾಗಿಲ್ಲ ಎಂದ ಚುನಾವಣಾ ಆಯೋಗ

Update: 2021-03-12 17:15 GMT

ಹೊಸದಿಲ್ಲಿ: ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಅಗಿರುವ ಗಾಯದ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಶುಕ್ರವಾರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ವರದಿ ಸಮಗ್ರವಾಗಿಲ್ಲ ಎಂದಿರುವ ಚುನಾವಣಾ ಆಯೋಗ ಶನಿವಾರ ಸಂಜೆಯೊಳಗೆ ಇನ್ನಷ್ಟು ವಿವರಗಳನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬ್ಯಾನರ್ಜಿ ಅವರನ್ನು ಯಾರೋ ಅಪರಿಚಿತರು ತಳ್ಳಿದ ಕಾರಣ ಕೆಳಗೆ ಬಿದ್ದ ಪರಿಣಾಮ ಅವರ ಎಡಗಾಲಿಗೆ ಹಾಗೂ ಪಾದಕ್ಕೆ ಗಾಯವಾಗಿತ್ತು.

ಈ ಘಟನೆಯ ಬಳಿಕ ಚುನಾವಣಾ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಧ್ಯಾಯ, ವಿಶೇಷ ವೀಕ್ಷಕ ಅಜಯ್ ನಾಯಕ್ ಹಾಗೂ ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ  ಅವರಿಂದ ವರದಿಯನ್ನು ಕೋರಿತ್ತು.

ವರದಿ ಸಾಕಷ್ಟು ಸಮಗ್ರವಾಗಿಲ್ಲದ ಕಾರಣ ಆಯೋಗವು ಈಗ ಪ.ಬಂಗಾಳ ಮುಖ್ಯ ಕಾರ್ಯದರ್ಶಿಯಿಂದ ಹೆಚ್ಚಿನ ವಿವರವನ್ನು ಕೋರಿದೆ. ಮುಖ್ಯ ಕಾರ್ಯದರ್ಶಿಗೆ ಶನಿವಾರ ಸಂಜೆ ವೇಳೆಗೆ ಹೊಸ ವಿವರ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News