×
Ad

ಮಾ. 14 : ಕಾರ್ಕಳಕ್ಕೆ ಎ.ಪಿ. ಉಸ್ತಾದ್

Update: 2021-03-12 22:45 IST

ಕಾರ್ಕಳ : ಖ್ಯಾತ ವಿದ್ವಾಂಸ ಇಂಡಿಯನ್‌ ಗ್ರ್ಯಾಂಡ್‌ ಮುಫ್ತಿ ಸುಲ್ತಾನುಲ್‌ ಉಲಮಾ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಕಾಂತಪುರಂ ಅವರು ಮಾ. 14ರಂದು ಕಾರ್ಕಳ ಬಂಗ್ಲೆಗುಡ್ಡೆಯ ಹಯಾತುಲ್‌ ಇಸ್ಲಾಂ ಅಸೋಸಿಯೇಷನ್‌ ತ್ವೈಬಾ ಗಾರ್ಡನ ಸ್ವಲಾತ್‌ ವಾರ್ಷಿಕ ಹಾಗೂ ಅಲ್‌ಅದವಿಯ್ಯಾ ಸನದುದಾನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 

 ಅಸ್ಸಯ್ಯದ್‌ ಸಾದಾತ್‌ ತಂಙಳ್‌ ಬಾಅಲವಿ ಗುರುವಾಯನಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಪ್ರಭಾಷಣಕರ, ದ್ಸಿಕ್ರಾ ಥಿಯೋಲಜಿಕಲ್‌ ಅಕಾಡಮಿ ಮೂಡಬಿದ್ರೆ ಇದರ ಪ್ರಧಾನ ಕಾರ್ಯದರ್ಶಿ ನೌಫಲ್‌ ಸಖಾಫಿ ಕಳಸ, ಉಡುಪಿ ಸಂಯುಕ್ತ ಜಮಾಅತ್‌ನ ಸಹಾಯಕ ಖಾಝಿ ಅಬ್ದುಲ್‌ ರಹಮಾನ್‌ ಮದನಿ, ಕರ್ನಾಟಕ ಮುಸ್ಲಿಂ ಜಮಾಅತ್‌ನ ರಾಜ್ಯ ಉಪಾಧ್ಯಕ್ಷ ಅಬೂಸು ಫ್ಯಾನ್‌ ಹೆಚ್.‌ಐ. ಇಬ್ರಾಹೀಂ ಮದನಿ ಮೂಡಬಿದ್ರಿ, ತ್ವೈಬಾ ಗಾರ್ಡನ್‌ ಪ್ರಾಂಶುಪಾಲ ಅಹ್ಮದ್‌ ಶರೀಫ್‌ ಸಅದಿ ಕಿಲ್ಲೂರು, ಮುಫ್ತಿ ಬದುರುದ್ದೀನ್‌ ಅಹಮ್ಮದ್‌ ಮಿಸ್ಬಾಯಿ ಮೂಡಬಿದ್ರಿ, ದಾರುಲ್‌ ಇರ್ಷಾದ್‌ ಮಾಣಿ ಇದರ ವ್ಯವಸ್ಥಾಪಕ ಇಬ್ರಾಹಿಂ ಸಅದಿ, ಉದ್ಯಮಿಗಳಾದ ಶಾಕಿರ್‌ ಹಾಜಿ ಹೈಸಂ ಮಂಗಳೂರು, ಮಮ್ತಾಝ್‌ ಅಲಿ ಕೃಷ್ಣಾಪುರ, ಮಹಮ್ಮದ್‌ ಗೌಸ್‌ ಮಿಯ್ಯಾರು, ಡಿಕೆಎಸ್‌ಸಿ ಕುವೈತ್‌ ಇದರ ಅಧ್ಯಕ್ಷ ಯೂಸುಫ್‌ ಹಾಜಿ ಶಿರ್ವ ಮಂಚಕಲ್‌, ಡಾ. ರಹ್ಮತುಲ್ಲಾ, ಶಬಿರಿಯಾ ಅರೆಬಿಕ್‌ ಕಾಲೇಜಿನ ಅಧ್ಯಕ್ಷ ಕೆಎಸ್‌ ಮಹಮ್ಮದ್‌ ಶಬೀರ್‌, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತಾಲೂಕು ಘಟಕದ ಅಧ್ಯಕ್ಷ ಮೊಹಮ್ಮದ್‌ ಶರೀಫ್‌, ಕಾರ್ಕಳ ಮುಸ್ಲಿಂ ಜಮಾಅತ್‌ ಅಧ್ಯಕ್ಷ ಅಶ್ಪಕ್‌ ಅಹಮ್ಮದ್‌, ಜಿಲ್ಲಾ ವಕ್ಫ್‌ ಸಮಿತಿ ಅಧ್ಯಕ್ಷ ನಾಸಿರ್‌ ಶೇಖ್‌ ಬೈಲೂರು, ಸ್ವಲಾತ್‌ ವಾರ್ಷಿಕ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ರಜಬ್‌ ಎ.ಕೆ., ಉದ್ಯಮಿ ಇಕ್ಬಾಲ್‌ ಹಾಜಿ ಅಸೈಗೋಳಿ, ಝೈನುಲ್‌ ಆಬಿದ್‌ ಸಖಾಫಿ ಮಾಗುಂಡಿ, ಎಸ್‌ಎಂವಿ ಕಾರ್ಕಳ ರಿಜನ್‌ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಐಡಿಯಲ್‌, ಎಸ್‌ವೈಎಸ್‌ ಉಡುಪಿ ಜಿಲ್ಲಾಧ್ಯಕ್ಷ ಮಹಮ್ಮದ್‌ ಹಾಜಿ ಗುಡ್‌ವಿಲ್, ಎಣ್ಣೆಹೊಳೆ ಜುಮಾ ಮಸೀದಿಯ ಅಧ್ಯಕ್ಷ ಪಿ.ಎ. ರಹೀಂ, ಅವಿಭಜಿತ ದ.ಕ. ಜಿಲ್ಲೆಯ ಸುನ್ನಿ ಮಸೀದಿ, ಮದ್ರಸಗಳ ಪದಾಧಿಕಾರಿಗಳು ಹಾಗೂ ಉಲಾಮಗಳು ಭಾಗವಹಿಸಲಿರುವರು ಎಂದು ತ್ವೈಬಾ ಗಾರ್ಡನ್‌ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಶರೀಫ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News