×
Ad

ಮಾ. 13, 14: ಭಟ್ಕಳದಲ್ಲಿ ರಾಜ್ಯ ಎಸ್ಸೆಸ್ಸೆಫ್ ನಿಂದ ಅಸಂಬ್ಲೇಜ್ ಕಾರ್ಯಾಗಾರ

Update: 2021-03-12 22:48 IST

ಭಟ್ಕಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಕೌನ್ಸಿಲರ್ಸ್ ರಿಗೆ ಅಸಂಬ್ಲೇಜ್ ಕಾರ್ಯಾಗಾರವು  ತಾಜುಸ್ಸುನ್ನ ಭಟ್ಕಳದಲ್ಲಿ  ಮಾ. 13ರ ಬೆಳಿಗ್ಗೆ 8 ಗಂಟೆಯಿಂದ ಮಾ.14ರ ಸಂಜೆ 4 ಗಂಟೆಯ ತನಕ ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಲಿರುವರು

ದ್ವಿದಿನ ನಡೆಯುವ ಅಸಂಬ್ಲೇಜ್ ಕಾರ್ಯಾಗಾರದಲ್ಲಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ,,ಮಜೀದ್ ಮಾಸ್ಟರ್ ಅರಿಯಲ್ಲೂರು, ರಾಶಿದ್ ಬುಖಾರಿ ಕೊಲ್ಲಂ  ಭಾಗವಹಿಸಲಿರುವರು ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News