×
Ad

ಮಂಗಳೂರು: ಮೊಂಬತ್ತಿ ಪ್ರದರ್ಶಿಸಿ ಪ್ರತಿಭಟನೆ

Update: 2021-03-12 23:08 IST

ಮಂಗಳೂರು, ಮಾ.12: ದ.ಕ.ಜಿಲ್ಲೆಯ ವಿಮಾ,ಬ್ಯಾಂಕ್, ರೈಲ್ವೆ, ಬಿಎಸ್‌ಎನ್‌ಎಲ್, ಆರ್‌ಎಂಎಸ್, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಎಲ್‌ಐಸಿಯ ಶೇರು ವಿಕ್ರಯ ಹಾಗೂ ಬ್ಯಾಂಕ್ ಖಾಸಗೀಕರಣ ವನ್ನು ವಿರೋಧಿಸಿ ನಗರದ ಆರ್‌ಟಿಒ ಕಚೇರಿ ಸಮೀಪದ ಎಲ್‌ಐಸಿ ಕಚೇರಿಯ ಮುಂದೆ ಶುಕ್ರವಾರ ಸಂಜೆ ಮೊಂಬತ್ತಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.

ವಿಮಾ ನೌಕರರ ಸಂಘದ ಮುಖಂಡ ಡೆರಿಕ್ ಲೋಬೋ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಬಿ.ಎಂ.ಮಾಧವ, ಕಾರ್ಮಿಕ ನಾಯಕ ಬಿ.ಶೇಖರ್, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ನಾಯಕ ರಾಘವ, ವಿಮಾ ಪ್ರತಿನಿಧಿಗಳ ಸಂಘಟನೆಯ ಮುಖಂಡ ರಮೇಶ್ ಕುಮಾರ್, ಕಾಂಗ್ರೆಸ್ ಕಾರ್ಮಿಕ ಘಟಕದ ಮುಖಂಡ ಲಾರೆನ್ಸ್ ಡಿಸೋಜ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ವಿಮಾ ನೌಕರರ ಮುಖಂಡರಾದ ವಿಶ್ವನಾಥ, ಪ್ರಭಾಕರ್ ಕುಂದರ್, ಬಿ.ಎನ್ ದೇವಾಡಿಗ, ರಾಘವೇಂದ್ರ ರಾವ್, ಆಲ್ವಿನ್ ಮಸ್ಕರೇನಸ್, ವಸಂತ ಕುಮಾರ್, ರಾಧಿಕಾ ಕಾಮತ್, ಬ್ಯಾಂಕ್ ನೌಕರರ ಮುಖಂಡರಾದ ಪುರುಷೋತ್ತಮ, ಸುನೀಲ್ ರಾಜ್, ಕಾರ್ಮಿಕ ನಾಯಕರಾದ ರಾಮಣ್ಣ ವಿಟ್ಲ, ರವಿಚಂದ್ರ ಕೊಂಚಾಡಿ, ಎಚ್.ವಿ.ರಾವ್, ವಿ.ಕುಕ್ಯಾನ್, ಕರುಣಾಕರ್, ಸುರೇಶ್ ಕುಮಾರ್, ಡಿವೈಎಫ್‌ಐ ನಾಯಕ ರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮತಿ ಎಸ್.ಹೆಗ್ಡೆ, ದಲಿತ ಮುಖಂಡರಾದ ಎಂ.ದೇವದಾಸ್, ಸಮುದಾಯದ ವಾಸುದೇವ ಉಚ್ಚಿಲ್, ಸಾಮಾಜಿಕ ಹೋರಾಟಗಾರರಾದ ಸುರೇಶ್ ಶೆಟ್ಟಿ, ಜೆರಾಲ್ಡ್ ಟವರ್, ಸಾಮಾಜಿಕ ಚಿಂತಕರಾದ ಅಶುಂತ ಡಿಸೋಜ, ಪ್ರಮೀಳಾ ದೇವಾಡಿಗ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News