ಬಡಜನ ಸೇವಾ ಫ್ರೆಂಡ್ಸ್ ಕುಪ್ಪೆಪದವು ನೇತೃತ್ವದಲ್ಲಿ ಮನೆ ಹಸ್ತಾಂತರ
ಕುಪ್ಪೆಪದವು : ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಹಾಗೂ ದಾನಿಗಳ ಸಹಕಾರದಿಂದ ಇಲ್ಲಿನ ಲೀಲಾ ದೊಡ್ಡಳಿಕೆ ಎಂಬವರಿಗೆ ಮನೆ ಹಸ್ತಾಂತರಿಸಿ, ಗ್ರಹಪ್ರವೇಶ ನಡೆಯಿತು.
ಕಾರ್ಯಕ್ರಮದಲ್ಲಿ ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಸ್ಥಾಪಕರಾದ ಅರ್ಜುನ್ ಭಂಡಾರ್ಕರ್, ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಿ.ಪಿ. ಹಮ್ಮಬ್ಬ, ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಆಳ್ವ ಕಡೆಗುಂಡ್ಯ, ಶ್ರೀದುರ್ಗೆಶ್ವರಿ ದೇವಿ ದೇವಸ್ಥಾನ ಕುಪ್ಪೆಪದವು ಆರ್ಚಕರಾದ ಸದಾಶಿವ ಕಾರಂತ್, ಗ್ರಾಮ ಪಂಚಾಯತ್ ಸದಸ್ಯರಾದ ನಿತೇಶ್, ಸ್ಪೂರ್ತಿ ವಿದ್ಯಾಲಯದ ಪ್ರಕಾಶ್ ಜೆ. ಶೆಟ್ಟಿಗಾರ್, ಉದ್ಯಮಿ ಸಂತೋಷ್ ಕಂಗಿನಡಿ, ನಝೀರ್ ಫೀದಾ ಎಂಟರ್ಪ್ರೈಸಸ್, ಸಾಲಿಕ್ ಆಲಿ ಹರ್ಷಿನ್ ಎಂಟರ್ಪ್ರೈಸಸ್, ಕಂಟ್ರಾಕ್ಟರ್ ಎನ್.ಎ. ಉಮರಬ್ಬ ಮತ್ತು ಮನೆಯ ಒಡತಿ ಲೀಲಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರಿಯಾಝ್ ಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಮುನೀರ್ ನಡುಪಲ್ಲ ವಂದಿಸಿದರು. ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಸ್ಥಾಪಕರಾದ ಅರ್ಜುನ್ ಭಂಡಾರ್ಕರ್ ಅವರಿಗೆ ಸನ್ಮಾನ ನಡೆಯಿತು.