×
Ad

ಉಳ್ಳಾಲ: ದಾರಿಮಿ ಉಲಮಾ ಗ್ರ್ಯಾಂಡ್ ಕನ್ವನ್ಶನ್ ಉದ್ಘಾಟನೆ

Update: 2021-03-13 15:11 IST

ಉಳ್ಳಾಲ : ಜಗತ್ತಿನಲ್ಲಿ ಶ್ರೇಷ್ಠ ವಾದ ಸಂಪತ್ತು ಧಾರ್ಮಿಕ ಶಿಕ್ಷಣ ಆಗಿದೆ. ಸಮಾಜದಲ್ಲಿ, ಸಮುದಾಯದ ದಲ್ಲಿ ಹಲವು ಸವಾಲು ಗಳನ್ನು ಎದುರಿಸುತ್ತಾ ಇದ್ದೇವೆ. ಸಮಾಜದ ಅಭಿವೃದ್ಧಿಗಾಗಿ ಸೇವೆ ಮಾಡುವಾಗ ಸವಾಲು ಎದುರಾಗುವುದು ಸಹಜ. ಪ್ರವಾದಿಯವರು ಕೂಡಾ ಧರ್ಮ ಪ್ರಚಾರದ ವೇಳೆ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಬಿ.ಎಂ.ಫಾರೂಕ್ ಹೇಳಿದರು.

ಅವರು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಆಶ್ರಯದಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ದಾರಿಮಿ ಉಲಮಾ ಗ್ರ್ಯಾಂಡ್  ಕನ್ವನ್ಶನ್ ನನ್ನು  ಉದ್ಘಾಟಿಸಿ ಮಾತನಾಡಿದರು.

ಜಿ.ಎ.ಬಾವಾ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ಪಡೆಯಬೇಕಾದುದು ನಮ್ಮ ಕರ್ತವ್ಯ. ಬ್ಯಾರಿ ಭವನ ಬೇಕು ಎಂದು ಕೂಗು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಬ್ಯಾರಿ ಭವನ ಈಗಾಗಲೇ ಇದೆ. ಮುಂದೆ ನಮ್ಮೂರಿನಲ್ಲೂ ಆರಂಭಿಸಬೇಕು. ಸಮಾಜ ಅಭಿವೃದ್ಧಿ ಧಾರ್ಮಿಕ ಗುರುಗಳ ಕೈಯಲ್ಲಿ ಇದೆ. ಇದಕ್ಕಾಗಿ ನಾವು ಒಟ್ಟಾಗೋಣ ಎಂದು ಕರೆ ನೀಡಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ವಿಚಾರಗಳು ಮಾನವ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಜನರಲ್ಲಿ ಧರ್ಮ ದ ಮಹತ್ವದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಧಾರ್ಮಿಕ ಗುರು ಗಳದ್ದಾಗಿದೆ. ಮೊಹಲ್ಲಾ ವ್ಯಾಪ್ತಿಯಲ್ಲಿ ಇರುವ ಜನರಿಗೆ ಪೂರ್ಣ ವ್ಯವಸ್ಥೆ ಮೊಹಲ್ಲಾ ದವರು ಮಾಡಿದರೆ ಸಮಾಜ ಬೆಳವಣಿಗೆ ಸಾಧ್ಯ ಆಗುತ್ತದೆ ಎಂದು ಹೇಳಿದರು.

ಎಸ್ ಬಿ ಮುಹಮ್ಮದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಸ್ಮಾನ್ ಫೈಝಿ ತೋಡಾರ್ ದುವಾ ನೆರವೇರಿಸಿದರು. 

ಈ ಸಂದರ್ಭದಲ್ಲಿ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಮೂಸಾ ದಾರಿಮಿ ಕಕ್ಕಿಂಜೆ,ಶುಕೂರು ದಾರಿಮಿ ಕರಾಯ, ಸುಲೈಮಾನ್ ದಾರಿಮಿ ಕೊಡಗು,ಸಂಪ್ಯ ಹಮೀದ್ ದಾರಿಮಿ, ಕಾಸಿಂ ದಾರಿಮಿ ತೋಡಾರು, ಉಮರ್ ದಾರಿಮಿ ಸಾಲ್ಮರ, ಅಬ್ದುಲ್ ಲತೀಫ್ ದಾರಿಮಿ, ಹೈದರ್ ದಾರಿಮಿ ತಬೂಕು ಅಬ್ದುಲ್ ರಹಿಮಾನ್ ದಾರಿಮಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ರವರ ನಾಯಕತ್ವ ದಲ್ಲಿ ದಾರಿಮಿ ಮುಲಾಖಾತ್ ವಿಚಾರ ಗೋಷ್ಠಿ, ಗ್ರೂಫ್ ಚರ್ಚೆ ಮಂಡನೆ ನಡೆಯಿತು. ಈ ವೇಳೆ ದಾರಿಮಿ ಉಲಮಾ ರಿಲೀಫ್ ಫಂಡ್ ಬಿಡುಗಡೆ ಮಾಡಲಾಯಿತು.

ಹಂಝ ಸಾಹಿಬ್ ಮೇಲಾಟ್ಟೂರು ಅಧ್ಯಯನ ಶಿಬಿರ ನಡೆಸಿದರು.ಜಾಮಿಯ ದಾರ್ರುಸಲಾಂ ಮುಖ್ಯಸ್ಥ ಅಬ್ದುಲ್ ರಹಿಮಾನ್ ಫೈಝಿ ಸಮಾರೋಪ ಭಾಷಣ ಮಾಡಿದರು. ಜಿ.ಎ.ಬಾವಾ,ಯು.ಕೆ.ಇಲ್ಯಾಸ್,ಯು.ಟಿ.ಇಲ್ಯಾಸ್,  ಎಸ್ ಬಿ ದಾರಿಮಿ, ಅನ್ವರ್ ದಾರಿಮಿ, ಹುಸೈನ್ ದಾರಿಮಿ ರೆಂಜಲಾಡಿ, ನೌಷಾದ್ ಅಲಿ  ,ಜಿಫ್ರಿ ದಾರಿಮಿ ತಂಙಳ್, ಆಝಾದ್ ಇಸ್ಮಾಯಿಲ್, ಫಾರೂಕ್ ಉಳ್ಳಾಲ್, ಮುಸ್ತಫಾ ಅಬ್ದುಲ್ಲಾ, ಮೋನು ಇಸ್ಮಾಯಿಲ್, ಆಸೀಫ್ ಅಬ್ದುಲ್ಲಾ, ಬಾವಾ ಮುಹಮ್ಮದ್,ಝೈನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಿರಾಅತ್ ಪಠಿಸಿದರು. ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News