ಉಪ್ಪಿನಂಗಡಿ : ಮಗುಚಿ ಬಿದ್ದ ಟ್ಯಾಂಕರ್; ಡೀಸೆಲ್ ಗಾಗಿ ನೂಕುನುಗ್ಗಲು
Update: 2021-03-13 15:23 IST
ಉಪ್ಪಿನಂಗಡಿ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಕ್ಕಿಲಾಡಿ ಬೊಳ್ಳಾರು ಎಂಬಲ್ಲಿ ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಮಗುಚಿ ಬಿದ್ದ ಘಟನೆ ಶನಿವಾರ ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಹೋಗುತ್ತಿದ್ದ ಟ್ಯಾಂಕರ್ ಬೊಳ್ಳಾರು ಬಳಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಡೀಸೆಲ್ ಗಾಗಿ ನೂಕುನುಗ್ಗಲು
ಟ್ಯಾಂಕರ್ ಮಗುಚಿ ಬಿದ್ದ ಕಾರಣ ಸೋರುತ್ತಿದ್ದ ಡೀಸೆಲನ್ನು ಸ್ಥಳಿಯರು ಮತ್ತು ವಾಹನ ಚಾಲಕರು ತಮ್ಮಲ್ಲಿದ್ದ ವಸ್ತುಗಳಲ್ಲಿ ತುಂಬಿಸಲು ಆರಂಭಿಸಿದ್ದು, ಪರಿಣಾಮ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು ಎಂದು ತಿಳಿದುಬಂದಿದ್ದು, ನಂತರ ಸ್ಥಳಕ್ಕೆ ಆಗಮಿಸಿ ಉಪ್ಪಿನಂಗಡಿ ಪೊಲೀಸರು ಡೀಸೆಲ್ ತುಂಬಿಸುತ್ತಿದ್ದ ಸ್ಥಳೀಯರಿಗೆ, ವಾಹನ ಚಾಲಕರಿಗೆ ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು ಎಂದು ತಿಳಿದುಬಂದಿದೆ.