36ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‍ಶಿಪ್: ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 18 ಪದಕಗಳು
ಮಂಗಳೂರು : ಮಂಗಳೂರಿನ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ 25 ಸ್ಕೇಟರ್‌ಗಳು ಮೈಸೂರಿನಲ್ಲಿ ಇತ್ತೀಚೆಗೆ ನಡೆದ 36ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿ ಸಾಧನೆಯನ್ನು ಮಾಡಿದ್ದಾರೆ.
25 ಮಂದಿ ಸ್ಕೇಟರ್‌ಗಳ ಪೈಕಿ 10 ಮಂದಿ ಸ್ಕೇಟರ್‌ಗಳು 5 ಚಿನ್ನ,8 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗಳಿಸುವ ಮೂಲಕ ಮಂಗಳೂರಿಗೆ ಕೀರ್ತಿಯನ್ನು ತಂದಿದ್ದಾರೆ.ಇವರಲ್ಲಿ ಸ್ಕೇಟರ್ ಗಳಾದ ಮುಹಮ್ಮದ್ ಶಾಮಿಲ್ ಅರ್ಷಾದ್, ಅನಘಾ ರಾಜೇಶ್, ಮುಹಮ್ಮದ್ ಫರಾಝ್ ಅಲಿ ಈ ಮೂವರು ಎಪ್ರಿಲ್‌ನಲ್ಲಿ ಪಂಜಾಬ್ ನ ಚಂಡೀಗಢದ ಮೊಹಾಲಿಯಲ್ಲಿ ನಡೆಯಲಿರುವ 58ನೇ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದಾರೆ.
ಪದಕ ವಿಜೇತರ ಪೈಕಿ ಮುಹಮ್ಮದ್ ಶಾಮಿಲ್ ಅರ್ಷದ್ 3 ಚಿನ್ನ, ಅನಘಾ ರಾಜೇಶ್ 2 ಚಿನ್ನ ಹಾಗೂ 1 ಬೆಳ್ಳಿ, ಮೊಹಮ್ಮದ್ ಫರಾಝ್ ಅಲಿ 2 ಬೆಳ್ಳಿ ಮತ್ತು 1 ಕಂಚಿನ ಪದಕ, ರುಷಭ್ ಮಂಜೇಶ್ವರ್ 1 ಬೆಳ್ಳಿ ಮತ್ತು 2 ಕಂಚು, ಡ್ಯಾಶೆಲ್ ಅಮಂಡಾಕಾನ್ಸೆಸ್ಸೋ 1 ಬೆಳ್ಳಿ ಮತ್ತು 1 ಕಂಚು,ಡೇನಿಯಲ್ ಸಾಲ್ವದೋರ್ ಕಾನ್ಸೆಸ್ಸೋ 1 ಬೆಳ್ಳಿ, ವಿವೇಕ್ 1 ಬೆಳ್ಳಿ, ತನ್ಮಯ್ ಎಂ ಕೊಟ್ಟಾರಿ 1 ಬೆಳ್ಳಿ, ಕೃತಿ ಕಯ್ಯ 1 ಕಂಚು ಮತ್ತು ವೇದಾಂತ್ ಉಪಾಧ್ಯ 1 ಕಂಚಿನ ಪದಕ ಗಳಿಸಿಕೊಂಡಿದ್ದಾರೆ. ಭಾಗವಹಿಸಿದ ಸ್ಪರ್ಧಿಗಳೆಲ್ಲರೂ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ತರಬೇತುದಾರರಾದ ಮೋಹನ್ ದಾಸ್ ಕೆ., ಜಯರಾಜ್ ಮತ್ತು ರಮಾನಂದ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.