×
Ad

ಕೋಡಿ ಬ್ಯಾರೀಸ್‍ನಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅಭಿಯಾನ

Update: 2021-03-13 15:39 IST

ಕೋಡಿ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ಸ್ಪಂದನ ಉಡುಪಿ ಹಾಗೂ ಚ್ಯಾಲೆಂಜರ್ಸ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ “ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಅಭಿಯಾನ” ನೆರವೇರಿತು.

ಕಾರ್ಯಕ್ರಮವನ್ನುದ್ದೇಶಿಸಿ ಭೃಷ್ಟಾಚಾರ ನಿಗ್ರಹದಳ ಉಡುಪಿ ಉಪ ಅಧೀಕ್ಷಕರಾದ ಬಿ.ಎಸ್.ಸತೀಶ್ ಇವರು “ಆಚಾರವೇ ಶಿಷ್ಟಾಚಾರ ಆಚಾರವನ್ನು ಅತಿಕೃಮಿಸುವುದೇ ಭೃಷ್ಟಾಚಾರ, ಯುವಶಕ್ತಿ ಭೃಷ್ಟಾಚಾರಕ್ಕೆ ಬದುಕಿನಲ್ಲಿ ಆಸ್ಪದಕೊಡದೇ ಭೃಷ್ಟಾಚಾರದ ನಿರ್ಮೂಲನೆಗೆ ಕಾರಣೀಕರ್ತರಾಗಬೇಕು” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರಹ್ಮಾನ್ ವಹಿಸಿಕೊಂಡಿದ್ದರು. ಚಾಲೆಂಜರ್ಸ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ ಶ್ರೀಯಾನ್, ಶ್ರೀ ನರಸಿಂಹ ಯುವಪ್ರವರ್ತಕ ಯುವ ಸ್ಪಂದನ ಕೇಂದ್ರ ಉಡುಪಿ, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಗಳಾದ ಡಾ. ಸಂದೀಪ ಕುಮಾರ ಶೆಟ್ಟಿ, ಘಟಕದ ವಿದ್ಯಾರ್ಥಿ ಮುಖಂಡ ಮೊಹಮ್ಮದ ಅಯಾನ್ ವೇದಿಕೆಯಲ್ಲಿ ಉಪಸ್ಥಿತರಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಸಂದೀಪ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ನುಡಿದರು. ವಿದ್ಯಾರ್ಥಿನಿ ಕಾವ್ಯಾ ಸ್ವಾಗತಿಸಿ, ನರಸಿಂಹ ಯುವ ಪ್ರವರ್ತಕರು ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News