'ಕ್ಯಾಂಪಸ್ ಥೇಟರ್-ರಂಗದಲ್ಲಿ ನಾವೂ-ನೀವೂ' ಕಾರ್ಯಗಾರ
Update: 2021-03-13 16:36 IST
ಮಂಗಳೂರು : ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಇವರ ವತಿಯಿಂದ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ 'ಕ್ಯಾಂಪಸ್ ಥೇಟರ್ - ರಂಗದಲ್ಲಿ ನಾವೂ... ನೀವೂ...' ಒಂದು ದಿನದ ರಂಗ ಪರಿಚಯ ಕಾರ್ಯಗಾರ ಶುಕ್ರವಾರ ನಡೆಯಿತು.
ಕಾರ್ಯಗಾರದಲ್ಲಿ ಕಾಲೇಜಿನ 30 ವಿದ್ಯಾರ್ಥಿಗಳು ಭಾಗವಹಿಸಿದ್ದು, ಜರ್ನಿ ಥೇಟರ್'ನ ಸದಸ್ಯರುಗಳಾದ ರಾಘವ ಸೂರಿ, ಸುಧೀಶ್ ಹಾಗೂ ಮೇಘನಾ ಕುಂದಾಪುರ ಕಾರ್ಯಾಗಾರವನ್ನು ನಿರ್ವಹಿಸಿದರು. ಅರ್ಲ್, ಶಶಾಂಕ್ ಮತ್ತು ಕಿರಣ್ ಜೊತೆಗಿದ್ದರು.
ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರೆ. ಫಾ. ಕ್ಲಿಫಾರ್ಡ್ ಸ್ವೀಕೇರಾ ಎಸ್.ಜೆ. ಅಧ್ಯಾಪಕರಾದ ಮೋಹನ್-ರಾಜ್, ಸಬೀನಾ, ರೀನಾ ಹಾಗೂ ಶಾರದಾ ಕಾರ್ಯಾಗಾರಕ್ಕೆ ಸಹಕರಿಸಿದರು.
ಮುಂದಿನ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ 'ಕ್ಯಾಂಪಸ್ ಥೇಟರ್' ಪಯಣ ಸಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.