"ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ, ಸಾವಿರಕ್ಕೂ ಹೆಚ್ಚು ಮದ್ರಸಾಗಳ ಮುಚ್ಚುಗಡೆ"

Update: 2021-03-13 12:28 GMT

ಕೊಲಂಬೊ: ಶ್ರೀಲಂಕಾ ಸರಕಾರವು ಮುಸ್ಲಿಮರು ಬುರ್ಖಾ ಧರಿಸುವುದನ್ನು ನಿಷೇಧಿಸುತ್ತದೆ ಮತ್ತು ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನು ಮುಚ್ಚಲಿದೆ ಎಂದು ಸರ್ಕಾರಿ ಸಚಿವರು ಶನಿವಾರ ಹೇಳಿಕೆ ನೀಡಿದ್ದಾರೆ. ಈ ನೂತನ ಕ್ರಮವು ದೇಶದ ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ ಎಂದು timesofindia.com ವರದಿ ತಿಳಿಸಿದೆ.

"ರಾಷ್ಟ್ರೀಯ ಭದ್ರತೆ" ಆಧಾರದ ಮೇಲೆ ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಪೂರ್ಣ ಮುಖಗವಸು ಹೊಂದಿರುವ ಬುರ್ಖಾವನ್ನು ನಿಷೇಧಿಸಲು ಕ್ಯಾಬಿನೆಟ್ ಅನುಮೋದನೆಗಾಗಿ ಶುಕ್ರವಾರ ಪತ್ರಿಕೆಗೆ ಸಹಿ ಹಾಕಿದ್ದಾರೆ ಎಂದು ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ನಮ್ಮ ಆರಂಭಿಕ ದಿನಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರು ಎಂದಿಗೂ ಬುರ್ಖಾ ಧರಿಸಲಿಲ್ಲ" ಎಂದ ಅವರು, "ಇದು ಇತ್ತೀಚೆಗೆ ಬಂದ ಧಾರ್ಮಿಕ ಉಗ್ರವಾದದ ಸಂಕೇತವಾಗಿದೆ. ನಾವು ಅದನ್ನು ಖಂಡಿತವಾಗಿ ನಿಷೇಧಿಸಲಿದ್ದೇವೆ." ಎಂದು ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿರುವ ಸಾವಿರಾರು ಇಸ್ಲಾಮಿಕ್‌ ಮದ್ರಸಾಗಳನ್ನು ಕೂಡಾ ನಾವು ಮುಚ್ಚಲಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. "ಎಲ್ಲರಿಗೂ ಶಾಲೆಯನ್ನು ತೆರೆಯಲು ಮತ್ತು ಮಕ್ಕಳಿಗೆ ತಮಗೆ ಬೇಕಾದದ್ದನ್ನು ಕಲಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಕೋವಿಡ್‌ 19 ಬಾಧಿಸಿ ಮೃತಪಟ್ಟವರನ್ನು ಮುಸ್ಲಿಮರ ಇಚ್ಛೆಗೆ ವಿರುದ್ಧ ದಫನಗೊಳಿಸುವ ಪ್ರಕ್ರಿಯೆಯ ಬಳಿಕ ಇದೀಗ ಮುಸ್ಲಿಮರು ಬುರ್ಖಾ ಧರಿಸದಂತೆ ಮತ್ತು ಇಸ್ಲಾಮಿಕ್‌ ಮದ್ರಸಾಗಳನ್ನು ಮುಚ್ಚುಗಡೆ ಮಾಡುವ ತೀರ್ಮಾನವು ಸರಕಾರದಿಂದ ಹೊರ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News