ಲೋಕ್ ಅದಾಲತ್‌ಗೆ 3104 ಪ್ರಕರಣಗಳ ಗುರುತು: ನ್ಯಾ. ಅರವಿಂದ ಕುಮಾರ್
ಉಡುಪಿ, ಮಾ.13: ಉಡುಪಿಯಲ್ಲಿ ಮಾ.27ರಂದು ನಡೆಯಲಿರುವ ಮೆಘಾ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಒಟ್ಟು 3104 ಪ್ರಕರಣ ಗಳನ್ನು ಈವರೆಗೆ ಗುರುತಿಸಲಾಗಿದೆ. ಇದಕ್ಕೆ ವಕೀಲರು, ಪೊಲೀಸರು ಹಾಗೂ ಇನ್ಸೂರೆನ್ಸ್ ಕಂಪೆನಿಗಳ ಸಹಕಾರದಿಂದ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್ ನ್ಯಾಯ ಮೂರ್ತಿ ಅರವಿಂದ ಕುಮಾರ್ ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಮೆಘಾ ಲೋಕ್ ಅದಾ ಲತ್ ಕುರಿತು ಚರ್ಚಿಸಲು ಉಡುಪಿ ಜಿಲ್ಲಾ ನ್ಯಾಯಾಲಯ ದಲ್ಲಿ ಶನಿವಾರ ಆಯೋಜಿಸಲಾದ ಸಭೆಯಲ್ಲಿ ಲೋಕ್ ಅದಾಲತ್‌ನ ಕರಪತ್ರವನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.
ಪೊಲೀಸರು ಯಾವುದೇ ಭಯ ಪಡಿಸದೆ ಸಂಯಮದಿಂದ ಮನದಟ್ಟು ಮಾಡಿದರೆ ದೂರುದಾರರು ಲೋಕ ಅದಾಲತ್‌ನಲ್ಲಿ ತಮ್ಮ ಪ್ರಕರಣವನ್ನು ಇತ್ಯರ್ಥ ಪಡಿಸಲು ಒಪ್ಪುವ ಸಾಧ್ಯತೆಗಳು ಇರುತ್ತದೆ. ಈ ಅವಕಾಶವನ್ನು ಪೊಲೀಸರು ಬಳಸಿಕೊಂಡರೆ ಅವರಿಗೆ ಒಳ್ಳೆಯ ಹೆಸರು ಬರಲು ಸಾಧ್ಯವಾು ತ್ತದೆ ಎಂದು ಅವರು ತಿಳಿಸಿದರು.
ಇನ್ಸೂರೆನ್ಸ್ ಕಂಪೆನಿಗಳು ವಿಮಾ ಪರಿಹಾರ ನೀಡುವ ವಿಚಾರದಲ್ಲಿ ಗಟ್ಟಿ ಯಾದ ನಿಲುವುಗಳನ್ನು ತಾಳಬಾರದು. ವಿಮಾ ಮೊತ್ತ ಪಾವತಿಸಲು ಹೆಚ್ಚು ಕಾಲ ತೆಗೆದುಕೊಂಡರೆ ಸಂತ್ರಸ್ತರಿಗೆ ಭರಿಸಬೇಕಾದ ಹಣದ ಪ್ರಮಾಣ ಹೆಚ್ಚಾ ಗುತ್ತದೆ. ಇದರಿಂದ ಕೋರ್ಟ್ ಸಮಯ ವ್ಯರ್ಥವಾಗುವುದಲ್ಲದೆ ಪ್ರಕರಣ ನಿರ್ವಹಣೆಗೆ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ಆದುದರಿಂದ ಇನ್ಸೂರೆನ್ಸ್ ಕಂಪೆನಿಗಳು ಲೋಕ ಅದಾಲತ್‌ಗಳಲ್ಲಿ ಪ್ರಕರಣ ಇತ್ಯರ್ಥ ಮಾಡಲು ಸಹಕಾರ ಕೊಡಬೇಕು ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಮಾತನಾಡಿದರು. ಇದೇ ಸಂದರ್ಭದಲ್ಲಿ ನ್ಯಾಯಾ ಲಯದ ಆದೇಶದಂತೆ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದಿಂದ ಪರಿಾರ ಮೊತ್ತವನ್ನು ವಿತರಿಸಲಾಯಿತು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್., ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ್, ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಾಧಿಕಾರದ ಕಾರ್ಯದರ್ಶಿ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.