ಸಾಲಿಡಾರಿಟಿ ಯೂತ್ ಮೂಮೆಂಟ್ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ
Update: 2021-03-13 20:01 IST
ಮಂಗಳೂರು, ಮಾ.13: ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕದ 2021-22 ಸಾಲಿನ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಮಂಗಳೂರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರೆಹಾನ್ ಅವರನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲಕ್ಕೆ ನೇಮಕ ಮಾಡಲಾಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಶ್ಫಾಕ್ ಅಹ್ಮದ್ ಮಂಗಳೂರು, ಡಾ.ತೌಸೀಫ್ ಮಡಿಕೇರಿ, ಮಾಝ್ ಸಲ್ಮಾನ್ ಮನಿಯಾರ್, ಹಂಝ ಮುಹಝಮ್ ಅಲಿ, ಅಲ್ತಾಫ್ ಅಮ್ಜದ್, ಯಾಸೀನ್ ಕೋಡಿಬೆಂಗ್ರೆ, ಮುಹಮ್ಮದ್ ಅಕೀಲ್ ಎಸ್, ಮುಹಮ್ಮದ್ ಫಾರೂಕ್, ಅಲಿ ಮುರ್ತಝಾ ಮತ್ತು ಅಡ್ವಕೇಟ್ ಅಬ್ದುಲ್ ಮಕ್ತಾದೀರ್ ಅವರನ್ನು ನೇಮಕ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.