×
Ad

ಮಾ.15ರಿಂದ ಬ್ಯಾಂಕ್ ನೌಕರರ ಮುಷ್ಕರ

Update: 2021-03-13 20:29 IST

ಉಡುಪಿ, ಮಾ.13: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧಿಸಿ ಬ್ಯಾಂಕಿನ ಅಧಿಕಾರಿಗಳು ಹಾಗೂ ನೌಕರರು ಮಾ.15ರಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಮುಷ್ಕರವನ್ನು ಆಯೋಜಿಸಿದ್ದಾರೆ.

ಈ ಪ್ರಯುಕ್ತ ಉಡುಪಿಯಲ್ಲಿ ಕೆನರಾ ಬ್ಯಾಂಕಿನ ಕೋರ್ಟ್ ರೋಡ್ ಶಾಖೆಯ ಎದುರು ಮಾ.15ರ ಬೆಳಗ್ಗೆ 10:15ಕ್ಕೆ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ಸಂಖ್ಯೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಉಡುಪಿ ಜಿಲ್ಲಾ ಯೂನಿಯನ್‌ಗಳ ಸಂಯುಕ್ತ ವೇದಿಕೆ ಸಂಚಾಲಕರಾದ ಹೆರಾಲ್ಡ್ ಡಿಸೋಜ ಅವರು  ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News