×
Ad

ಉಡುಪಿ: ಸಾಧಕರಿಗೆ ‘ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ’ ಪ್ರದಾನ

Update: 2021-03-13 20:53 IST

ಉಡುಪಿ, ಮಾ.13: ಬೆಂಗಳೂರಿನ ಪತ್ರಕರ್ತರ ವೇದಿಕೆ ಮತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ 'ವಾರ್ತಾಭಾರತಿ'ಯ ಸತ್ಯಾ ಕೆ., ಸುದ್ಧಿ ಚಾನಲ್‌ನ ದುರ್ಗಾ ಕುಮಾರ್ ನಾಯರ್‌ಕೆರೆ ಮತ್ತು ವ್ಯಂಗ್ಯಚಿತ್ರಕಾರ ಕೊಪ್ಪಳದ ಬದರಿ ಪುರೋಹಿತ್ ಅವರಿಗೆ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಯನ್ನು ಶನಿವಾರ ಉಡುಪಿಯ ಜಗನ್ನಾಥ ಸಭಾ ಭವನದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ರಾಜೇಶ ಶಿಬಾಜೆಯಂತಹ ಸಾಧಕ, ಪ್ರಾಮಾಣಿಕ ಪತ್ರಕರ್ತರನ್ನು ಸ್ಮರಿಸಿ ಈಗಿನ ಸಾಧಕ ಪತ್ರಕರ್ತರಿಗೆ ಗೌರವ ಸಲ್ಲಿಸು ಈ ಕೆಲಸ ಪ್ರೇರಣಾದಾಯಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಡಗಬೆಟ್ಟು ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಅನುದಾನಿತ ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವ ಕೆಲಸ ಆಗ ಬೇಕಾಗಿದೆ. ಸರಕಾರ ಕೊರತೆಗಳನ್ನು ಪರಿಹರಿಸಿ ಅವುಗಳನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಡಾ.ಶೇಖರ ಅಜೆಕಾರು ವಹಿಸಿದ್ದರು. ರೂಪಾ ವಸುಂಧರಾ ಆಚಾರ್ಯ ಅವರ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಏಕವ್ಯಕ್ತಿ ಪುಷ್ಟಾಂಜಲಿ ಕಲಾಪ್ರದರ್ಶನವನ್ನು ಕಲಾವಿದ ಪಿ.ಎನ್ ಆಚಾರ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ರಾಜಶೇಖರ ಹೆಬ್ಬಾರ್, ವಿಶ್ರಾಂತ ಪ್ರಾಧ್ಯಾಪಕ ಎ.ಎಂ.ನರಹರಿ ಮಂಗಳೂರು, ಉದ್ಯಮಿ ವಿಶ್ವನಾಥ ಶೆಣೈ ಉಡುಪಿ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು, ಕರ್ನಾಟಕ ಕಾಯಕರತ್ನ ನಾಗಪ್ಪಬಸಪ್ಪ ಕುರುವತ್ತಿ ಗೌಡರ್ ಕೊಪ್ಪಳ ಭಾಗವಹಿಸಿದ್ದರು.

ಎಂಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬೊರ್ಗಲ್ಗುಡ್ಡೆ ಮಂಜುನಾಥ ಕಾಮತ್ ಅಭಿನಂದನಾ ಭಾಷಣ ಮಾಡಿದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಎ., ಮಕ್ಕಳ ವಿಭಾಗದ ಸುನಿಧಿ ಮತ್ತು ಸುನಿಜ ಉಪಸ್ಥಿತರಿದ್ದರು. ಯುವ ಸಾಧಕಿ ಕಾವ್ಯ ಕಣಂಜಾರು ನಿರೂಪಿಸಿದರು. ಕಾರ್ಮಿಕ ಸಾಹಿತಿ ಈರಣ್ಣ ಕುರುವತ್ತಿ ಗೌಡರ್ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಗೋರೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News