ಮನೆಯಂಗಳದಲ್ಲಿದ್ದ ಅಡಿಕೆ ಕಳವು

Update: 2021-03-13 15:32 GMT

ಅಜೆಕಾರು, ಮಾ.13: ಮನೆಯಂಗಳದಲ್ಲಿ ಇರಿಸಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆ ಕಳವು ಆಗಿರುವ ಘಟನೆ ಮರ್ಣೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಮಾ.12ರಂದು ನಡೆದಿದೆ.

ಜಯಶ್ರೀ ಎಂಬವರ ಮನೆಯಂಗಳದಲ್ಲಿ 3 ಪ್ಲಾಸ್ಟಿಕ್ ಗೋಣಿಚೀಲದಲ್ಲಿ ತಲಾ 10 ಕೆ.ಜಿಯಂತೆ ಕೂಡಿಟ್ಟ ಅಡಿಕೆಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಒಟ್ಟು 30 ಕೆ.ಜಿ ಅಡಿಕೆಯ ಮೌಲ್ಯ ಸುಮಾರು 6,000 ರೂ. ಎಂದು ಗುರುತಿಸಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News