×
Ad

ಮೂಡುಬಿದಿರೆಯಲ್ಲಿ ಒಂದೇ ಮನೆಯ ಐವರು ನಾಪತ್ತೆ

Update: 2021-03-13 21:31 IST

ಮಂಗಳೂರು, ಮಾ.13: ಮೂಡುಬಿದಿರೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಐದು ಮಂದಿ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ.

ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36), ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ಮನೋರಂಜಿತಂ (56) ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ (36) ಎಂಬವರು ಮಾ.10ರಂದು ತನ್ನ ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, ಎಪ್ಸಿಬಾ ಹಾಗೂ ಅತ್ತೆ ಮನೋರಂಜಿತಂ ಜತೆ ನಾಪತ್ತೆಯಾಗಿದ್ದಾರೆ. ಈ ಸಂದರ್ಭ ಇವರು ಗೊಡ್ರೇಜ್ ಲಾಕರಿ ನಲ್ಲಿ ಇರಿಸಿದ್ದ ಬಂಗಾರದ ಆಭರಣ ಮತ್ತು 1.40 ಲಕ್ಷ ರೂ. ನಗದನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಮಹಿಳೆಯು ಪತಿಯ ಗಮನಕ್ಕೂ ಬಾರದಂತೆ ತನ್ನ ಬಂಗಾರದ ಒಡವೆಗಳನ್ನು ಫೈನಾನ್ಸ್‌ವೊಂದರಲ್ಲಿ ಅಡಮಾನ ಇಟ್ಟಿದ್ದಾರೆ. ಇದರಿಂದ ಬಂದ 1.80 ಲಕ್ಷ ರೂ.ನ್ನು ಆಕೆಯ ಸ್ನೇಹಿತನಿಗೆ ನೀಡಿದ್ದಾರೆ. ಅಡಮಾನ ಇಟ್ಟ ಒಡವೆಗಳನ್ನು ಬಿಡಿಸಿಕೊಂಡು ಬರುವಂತೆ ಪತಿ ಸೂಚಿಸಿದ ಬೆನ್ನಲ್ಲೇ ಮನೆಯಿಂದ ಪರಾರಿಯಾಗಿದ್ದಾರೆ. ಮಹಿಳೆಯು ತನ್ನ ತವರು ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News