ಮಾ. 20ರಿಂದ ಮಾಪಳಡ್ಕ ಉರೂಸ್
ಸುಳ್ಯ : ಜಾಲ್ಸೂರು ಗ್ರಾಮದ ಮಾಪಳಡ್ಕದ ದರ್ಗಾ ಶರೀಫ್ ನಲ್ಲಿ ಮಖಾಂ ಉರೂಸ್ ಕಾರ್ಯಕ್ರಮ ಮಾ.20ರಿಂದ ನಡೆಯಲಿದೆ ಎಂದು ಮಸೀದಿಯ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಹೇಳಿದರು.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಾಲ್ಲೂರು ಸಮೀಪದ ಮಾಪಳಡ್ಕದಲ್ಲಿ ಜಾತಿ ಧರ್ಮ ಮತ ಬೇದಭಾವಗಳಿಗೆ ಅತೀತವಾಗಿ ಸರ್ವ ಧರ್ಮೀಯರ ಸೌಹಾರ್ದ ತಾಣ ಹಾಗೂ ಸಮಸ್ಯೆ ಸಂಕಷ್ಟ ಗಳ ಪರಿಹಾರ ಕೇಂದ್ರವಾ ಗಿರುವ ಮಾಪಳಡ್ಕ ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರವ ಸಜ್ಜನ ಸಾತ್ವಿಕ ಔಲಿಯಾ ಶ್ರೇಷ್ಠರ ಸ್ಮರಣಾರ್ಥ ವಾಗಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ಮಾ. 20 ರಂದು ಕಾರ್ಯಕ್ರಮಗಳ ಅಧಿಕೃತ ಚಾಲನೆ ನಡೆಯಲಿದ್ದು ಅಂದು ರಾತ್ರಿ ಇಶಾ ನಮಾಝ್ ಬಳಿಕ ಸಯ್ಯದ್ ಪೂಕುಂಜ್ಞೆ ತಂಙಳ್ ಆದೂರು ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು , ಲುಕ್ ಮಾನುಲ್ ಹಕೀಂ ಸಖಾಫಿ ಪುಲ್ಲಾರ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ. 21ರಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ದಿಕ್ಸ್ ಹಾಗೂ ಹರಕೆ ಕಾರ್ಯಕ್ರಮ ನಡೆಯಲಿದ್ದು ಇಶಾ ನಮಾಝನ ಇರುವಂಬಳ್ಳ ಜಮಾಅತ್ ಗೌರವಾಧ್ಯಕ್ಷರಾದ ಸಂಕೇಶ್ ಇಬ್ರಾಹೀಮ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು, ನವಾಝ್ ಮನ್ನಾನಿ ಕೊಲ್ಲಂ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ.22 ರಂದು ರಾತ್ರಿ ಉರೂಸಿನ ಸಮಾರೋಪ ಸಮಾರಂಭ ನಡೆಯಲಿದ್ದು ಮಗ್ರಿಬ್ ನಮಾಝ್ ಬಳಿಕ ಮೌಲಿದ್ ಕಾರ್ಯಕ್ರಮ ಹಾಗೂ ಇಶಾ ನಮಾಝ್ ಬಳಿಕ ಬಹು ಇರುವಂಬಳ್ಳ ಜಮಾಅತ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿಯವರ ಅಧ್ಯಕ್ಷತೆಯಲ್ಲಿ ಸಯ್ಯದ್ ಸುಹೈಲ್ ತಂಙಳ್ ಮಡಕ್ಕರ ಕೇರಳ ಪ್ರಾರ್ಥನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದು ಪೇರೋಡು ಮುಹಮ್ಮದ್ ಅಝ್ ಹರಿ ಮುಖ್ಯ ಭಾಷಣ ಮಾಡಲಿದ್ದಾರೆ .
ಮಾಪಳಡ್ಕ ಮುದರ್ರಿಸ್ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ , ಇರುವಂಬಳ್ಳ ಖತೀಬ್ ಹಸೈನಾರ್ ಸಅದಿ , ಝುಬೈರ್ ಅನಿ ಪಳ್ಳತ್ತೂರು , ಸಿ.ಕೆ ಅಬ್ದುಲ್ಲಾ ಹಾಮಿದಿ , ಹಸೈನಾರ್ ಬಾಹಸನಿ ಹಾಗೂ ಇನ್ನಿತರ ಹಲವಾರು ಸುಪ್ರಸಿದ್ದ ಉಲಮಾ ಉಮರಾ ಸಾದಾತ್ ಗಳು ಆಗಮಿಸಲಿದ್ದಾರೆ . ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಕೋವಿಡ್ 19 ನೀತಿ ನಿಯಮಗಳಿಗೆ ಬದ್ಧವಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಹಾಗೂ ಕಾಣಿಕೆ ಇತ್ಯಾದಿಗಳನ್ನು ಉರೂಸಿಗೆ ಮುಂಚಿತವಾಗಿ ನೀಡಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ , ಜಮಾಅತ್ ಕಾರ್ಯದರ್ಶಿ ಟಿ , ಎಚ್ ಮುಹಮ್ಮದ್ ಕುಂಞಿ ತುಪ್ಪಕಲ್ , ಉಪಾಧ್ಯಕ್ಷ ಹಸೈನಾರ್ ದರ್ಮತನ್ನಿ , ಕೋಶಾಧಿಕಾರಿ ಬೀರಾನ್ ಹಾಜಿ ಭಾಗವಹಿಸಿದರು.