×
Ad

ಅಲ್ ಮದೀನ ಮಲಾಝ್ ಕಾಂಪ್ಲೆಕ್ಸ್ ಉದ್ಘಾಟನೆ

Update: 2021-03-13 23:04 IST

ಮಂಜನಾಡಿ: ಇಲ್ಲಿಯ ಅಲ್ ಮದೀನ ಸಂಸ್ಥೆಗಾಗಿ ಅಲ್ ಮದೀನ ಮಲಾಝ್ ಕಮಿಟಿ ನಿರ್ಮಿಸಿಕೊಟ್ಟ ವಾಣಿಜ್ಯ ಸಂಕೀರ್ಣ ಹಾಗೂ ಸುಸಜ್ಜಿತ  ಸಭಾಭವನ 'ಶರಫುಲ್ ಉಲಮಾ ಆಡಿಟೋರಿಯಂ' ಇದರ ಉದ್ಘಾಟನೆಯನ್ನು ದ.ಕ.ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್  ನೆರವೇರಿಸಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲಾಝ್ ಕಮಿಟಿಯ ಚೆಯರ್ಮಾನ್ ಹಾಜೀ ಫಾರೂಖ್ ಅಬ್ಬಾಸ್ ಉಳ್ಳಾಲ ಸ್ವಾಗತಿಸಿದರು.

ರಾಜ್ಯ ಎಸ್ ವೈ ಎಸ್ ಪ್ರ.ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ,  ಮುಹಮ್ಮದ್ ಕುಂಞಿ ಅಮ್ಜದಿ, ಹನೀಫ್ ಹಾಜಿ ಉಳ್ಳಾಲ, ಮುದರ್ರಿಸ್ ಅಬ್ದುಲ್ಲ ಅಹ್ಸನಿ ಶುಭ ಹಾರೈಸಿದರು. ಹಾಫಿಲ್ ತ್ವಯ್ಯಿಬ್ ಖಿರಾಅತ್ ಪಠಿಸಿದರು.

ವೇದಿಕೆಯಲ್ಲಿ  ಅಬ್ಬಾಸ್ ಹಾಜಿ ಉಳ್ಳಾಲ,   ಹಾಜಿ ಅಬ್ದುಲ್ಲ ಮೋರ್ಲ, ಅಬ್ದುರ್ರಹ್ಮಾನ್ ಅಹ್ಸನಿ, ಅಝೀಝ್ ಅಹ್ಸನಿ, ಅಬ್ದುಸ್ಸಲಾಂ ಅಹ್ಸನಿ, ಇಸ್ಮಾಯಿಲ್ ಸಅದಿ ಕಿನ್ಯ , ಕುಂಞಿ ಬಾವ ಹಾಜಿ, ಶೌಕತ್ ಹಾಜಿ, ಇಸ್ಮಾಯಿಲ್ ಮೀನಂಕೋಡಿ, ಪುತ್ತಿಚ್ಚ ಮೋರ್ಲ ಉಪಸ್ಥಿತರಿದ್ದರು.

ಮಲಾಝ್ ಕಮಿಟಿಯ ಚೆಯರ್ಮಾನ್ ಹಾಜಿ ಫಾರೂಖ್ ಆಬ್ಬಾಸ್ ಮತ್ತು ಕೋ ಆರ್ಡಿನೇಟರ್ ಹಾಜಿ ಮೊಯ್ದಿನ್ ಕುಂಞಿ ಮೊಂಟೆಪದವು ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಮಲಾಝ್ ಕಮಿಟಿ ಸದಸ್ಯರು ಮತ್ತು ಸಂಸ್ಥೆಯ ಹಿತೈಷಿಗಳು ಭಾಗವಹಿಸಿದರು. ಇಕ್ಬಾಲ್ ಮರ್ಝೂಖಿ ಸಖಾಫಿ ಧನ್ಯವಾದವಿತ್ತರು. ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News