ಪ್ರಜಾಪ್ರಭುತ್ವ ಹೋರಾಟಗಾರರ ದಮನ ನಿಲ್ಲಿಸಿ: ಚೀನಾಕ್ಕೆ ಜಿ7 ದೇಶಗಳ ಒತ್ತಾಯ

Update: 2021-03-13 18:26 GMT
ಹಾಂಕಾಂಗ್‌ ಪ್ರಜಾಪ್ರಭುತ್ವ ಹೋರಾಟ

ವಾಶಿಂಗ್ಟನ್, ಮಾ. 13: ಹಾಂಕಾಂಗ್‌ಗಾಗಿನ ತನ್ನ ಬದ್ಧತೆಗಳನ್ನು ಚೀನಾ ಗೌರವಿಸಬೇಕು ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರ ವಿರುದ್ಧದ ದಮನ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಜಿ7 ಗುಂಪಿನ ದೇಶಗಳು ಶುಕ್ರವಾರ ಚೀನಾವನ್ನು ಒತ್ತಾಯಿಸಿವೆ.

ಹಾಂಕಾಂಗ್‌ನ ಚುನಾವಣಾ ವ್ಯವಸ್ಥೆಗೆ ಚೀನಾ ತಂದಿರುವ ಆಮೂಲಾಗ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ದೇಶಗಳು ಈ ಹೇಳಿಕೆ ನೀಡಿವೆ. ಕೇವಲ ‘ದೇಶಭಕ್ತರು’ ಮಾತ್ರ ಹಾಂಕಾಂಗ್‌ನ ಆಡಳಿತವನ್ನು ನಡೆಸಬೇಕು ಎಂಬುದಾಗಿ ನೂತನ ಬದಲಾವಣೆಗಳು ಹೇಳುತ್ತವೆ.

ಈ ನಗರದ ನಿಯಂತ್ರಣವನ್ನು ಬ್ರಿಟನ್ 1997ರಲ್ಲಿ ಚೀನಾಕ್ಕೆ ಹಸ್ತಾಂತರಿಸುವ ಮೊದಲು, ನಗರಕ್ಕೆ ಚೀನಾಕ್ಕಿಂತ ಬೇರೆಯದೇ ಆದ ಆಡಳಿತ ವ್ಯವಸ್ಥೆಯನ್ನು ತರುವುದಾಗಿ ಚೀನಾ ಭರವಸೆ ನೀಡಿತ್ತು.

‘‘ಹಾಂಕಾಂಗ್‌ನಲ್ಲಿರುವ ಭಿನ್ನಮತ ಮತ್ತು ಭಿನ್ನಾಭಿಪ್ರಾಯಗಳನ್ನು ದಮನಿಸಲು ಚೀನಾ ದೃಢನಿರ್ಧಾರ ಮಾಡಿದೆ ಎನ್ನುವುದನ್ನು ಈ ಬದಲಾವಣೆಗಳು ಸೂಚಿಸುತ್ತವೆ’’ ಎಂದು ಜಿ7 ದೇಶಗಳು ಮತ್ತು ಐರೋಪ್ಯ ಒಕ್ಕೂಟ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಜಿ7 ಸದಸ್ಯ ದೇಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News