ಮಾ.15,16: ಬ್ಯಾಂಕ್ ಉದ್ಯೋಗಿಗಳ ಮುಷ್ಕರ

Update: 2021-03-14 11:27 GMT

ಮಂಗಳೂರು, ಮಾ.14: ಎರಡು ಸಾರ್ವಜನಿಕ ರಂಗದ ಬ್ಯಾಂಕ್ ಮತ್ತು ಒಂದು ವಿಮಾ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು 2021ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರ ನಡೆಯನ್ನು ಖಂಡಿಸಿ ಮಾ.15, 16ರಂದು ಕರಾವಳಿ ಕರ್ನಾಟಕದಲ್ಲೂ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯುನಿಯಾನ್ಸ್ (ಯುಎಫ್ ಬಿ ಐ) ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ ಎಂದು ತಿಳಿದು ಬಂದಿದೆ.

ಕರಾವಳಿಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಬ್ಯಾಂಕ್ ಉದ್ಯೋಗಿಗಳಿದ್ದಾರೆ. ಮುಷ್ಕರ ನಡೆಯುವ ಎರಡು ದಿನವೂ ದ.ಕ. ಜಿಲ್ಲೆಯ ಎಲ್ಲ ಬ್ಯಾಂಕಿಂಗ್ ಚಟುವಟಿಕೆಗಳು ಪೂರ್ಣ ಸ್ತಬ್ಧಗೊಳ್ಳುವ ನಿರೀಕ್ಷೆ ಇದೆ. ಮಂಗಳೂರು ಮಿನಿವಿಧಾನ ಸೌಧದ ಮುಂದೆ ಮಾ.15ರಂದು ಬೆಳಗ್ಗೆ 10ರಿಂದ ಬ್ಯಾಂಕ್ ಉದ್ಯೋಗಿಗಳು ಧರಣಿ ನಡೆಸಲಿದ್ದಾರೆ. ಮಾ.16ರಂದು ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ. ಎರಡು ದಿನಗಳ ಕಾಲ ಒಂಬತ್ತು ಬ್ಯಾಂಕ್‌ಗಳ ಯುನಿಯನ್‌ಗಳು ಜತೆಯಾಗಿ ಪ್ರತಿಭಟನೆ ಮಾಡಲಿದೆ ಎಂದು ಯುಎಫ್ ಬಿ ಐ ದ.ಕ. ಸಂಯೋಜಕ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News