×
Ad

ಎ. 2 ರಂದು ಪ್ರಥಮ 'ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ': ಪುತ್ತೂರಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2021-03-14 17:47 IST

ಪುತ್ತೂರು : ಒಡಿಯೂರು ಸ್ವಾಮೀಜಿಗಳ ಷಷ್ಠ್ಯಬ್ಧ ಸಂಭ್ರಮದ ಪ್ರಯುಕ್ತ ಪೂವರಿ ಪತ್ರಿಕಾ ಬಳಗ ಆಶ್ರಯದಲ್ಲಿ, ಷಷ್ಠ್ಯಬ್ಧ ಪುತ್ತೂರು ತಾಲೂಕು ಸಮಿತಿ ಸಹಯೋಗದಲ್ಲಿ ತುಳುನಾಡಿನಲ್ಲಿ ಪ್ರಥಮ ಬಾರಿಗೆ ನಡೆಯಲಿರುವ 'ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ'ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆಯಿತು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದೇವಳದ ಪ್ರಧಾನ ಅರ್ಚಕ ಕೆ. ವೆಂಕಟೇಶ ಸುಬ್ರಹ್ಮಣ್ಯ ಭಟ್ ಪ್ರಾರ್ಥನೆ ಸಲ್ಲಿಸಿzರು.

ಈ ಸಂದರ್ಭದಲ್ಲಿ ಒಡಿಯೂರು ಸ್ವಾಮೀಜಿ ಷಷ್ಠ್ಯಬ್ಧ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ ರೈ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅರುಣ್‍ಕುಮಾರ್ ಪುತ್ತಿಲ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ಸದಸ್ಯರಾದ ರವೀಂದ್ರನಾಥ ರೈ  ಬಳ್ಳಮಜಲು, ರಾಮದಾಸ್ ಗೌಡ, ಷಷ್ಠ್ಯಬ್ಧ ಸಮಿತಿ ಗೌರವ ಸಲಹೆಗಾರ ದೇವಪ್ಪ ನೋಂಡ, ಸಂಯೋಜಕ ರಾಜೇಶ್ ಬನ್ನೂರು, ಕಾರ್ಯದರ್ಶಿ ರಂಜಿನಿ ಶೆಟ್ಟಿ, ಸದಸ್ಯರಾದ ಕಲಾವಿದ ಕೃಷ್ಣಪ್ಪ ಶಿವನಗರ, ಭಾಸ್ಕರ ಬಾರ್ಯ, ಲೋಕೇಶ್ ಹೆಗ್ಡೆ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಸಮಿತಿ ಸಂಚಾಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸ್ವಾಗತಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News