ಬ್ಯಾನಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು; ಗ್ರಾಮಸ್ಥರಲ್ಲಿ ಆತಂಕ

Update: 2021-03-14 13:17 GMT

ಮುಂಡಗೋಡ: ಕಾಡಾನೆಗಳು ಕಳೆದ 10-15 ದಿನಗಳಿಂದ ತಾಲೂಕಿನ ಬ್ಯಾನಳ್ಳಿ ಗ್ರಾಮದ ಹೊಲಗದ್ದೆಗಳಿಗೆ ನುಗ್ಗಿ ಬೇಸಿಗೆ ಪೈರನ್ನು ನಾಶಪಡಿಸುತ್ತಿರುವುದರಿಂದ ರೈತರು ಸಂಕಷ್ಟ ಹಾಗೂ ತೀವ್ರ ಹಾನಿ ಅನುಭವಿಸುವಂತಾಗಿದೆ.

ಬ್ಯಾನಳ್ಳಿ ಗ್ರಾಮದ ಕಾಡು ಪ್ರದೇಶದಲ್ಲಿ ನಾಲ್ಕೈದು ಕಾಡಾನೆಗಳು ಬೀಡು ಬಿಟ್ಟಿದ್ದು, ಕತ್ತಲಾಗುತ್ತಿದ್ದಂತೆ ಗದ್ದೆಗಳಿಗೆ ನುಗ್ಗಿ ಪೈರನ್ನು ನಾಶಪಡಿಸುತ್ತಿವೆ. ಕಾಡಾನೆಗಳು ಗ್ರಾಮದ ಹತ್ತಿರ ಸುಳಿದಾಡುತ್ತಿರುವುದರಿಂದ ಬ್ಯಾನಳ್ಳಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಬಾಗು ಜಾನು ಜೋರೆ, ನಾಗರಾಜ ಕಾತ್ರಾಟ, ವಿಠ್ಠು ವರಕ ಎಂಬ ರೈತರ ಗೋವಿನ ಜೋಳ ಗದ್ದೆಗಳಿಗೆ ನುಗ್ಗಿ ಗೋವಿನ ಜೋಳದ ಬೆಳೆಯನ್ನು ಹಾಗೂ ನೀರಿನ ಸಂಬಂದ ಅಳವಡಿಸಲಾಗಿರುವ ಪೈಪುಗಳನ್ನು ತುಳಿದು ನಾಶಪಡಿಸಿವೆ. ಅರಣ್ಯ ಇಲಾಖೆ ಅರಣ್ಯ ಓಡಿಸಲು ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News