ಕುಂಪಲ: ಗಾಂಜಾ ವ್ಯಸನದ ವಿರುದ್ಧ ಮೌನ ಪ್ರತಿಭಟನೆ
ಉಳ್ಳಾಲ: ಕುಂಪಲ ಪರಿಸರದಲ್ಲಿ ಗಾಂಜಾ ವ್ಯಸನ ಅವ್ಯಾಹತವಾಗಿದೆ ಎಂದು ಆರೋಪಿಸಿ ಸ್ಥಳೀಯರು ಆಶ್ರಯ ಕಾಲನಿಯಿಂದ ಕುಂಪಲ ಶಾಲೆಯವರೆಗೆ ರವಿವಾರ ಮೌನ ಪ್ರತಿಭಟನೆ ನಡೆಸಿದರು
ಆಶ್ರಯ ಕಾಲನಿಯಲ್ಲಿ ಮನೆಯಿಂದ ಹೊರಗೆ ಬರಲು ಜನರು ಹೆದರೋ ವಾತಾವರಣ ನಿರ್ಮಾಣವಾಗಿದೆ. ಗಾಂಜಾ ವ್ಯಸನಿಗಳು ಕುಂಪಲದ ಹೆಸರನ್ನ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಗಾಂಜಾ ವ್ಯಸನವನ್ನು ಮಟ್ಟ ಹಾಕಲು ಪೊಲೀಸರು ಬಹಳಷ್ಟು ಶ್ರಮಿಸುತ್ತಿದ್ದು, ಪರಿಸರದ 13 ಯುವಕರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿ, ಅದರಲ್ಲಿ 11 ಮಂದಿ ಗಾಂಜಾ ವ್ಯಸನಿಗಳೆಂದು ಧೃಢಪಟ್ಟಿದೆ.ಇವರನ್ನು ಕುಂಪಲದಿಂದಲೇ ಹೊರಗಿಟ್ಟು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಸೋಮೇಶ್ವರ ಪುರಸಭಾ ಮಾಜಿ ಸದಸ್ಯರಾದ ಮೋಹನ್ ಶೆಟ್ಟಿ, ಗಂಗಾಧರ ಗಟ್ಟಿ, ಶಿವಾನಂದ ಟೈಲರ್, ಕಿಶೋರ್ ಕುಂಪಲ, ಅಶೋಕ್ ಕುಂಪಲ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ವಿಜಯ್ ಪ್ರಕಾಶ್ ಕುಂಪಲ, ಸ್ಥಳೀಯರಾದ ಚೇತನ್ ಶೆಟ್ಟಿ ಕುಂಪಲ, ನಿವೃತ್ತ ಯೋಧ ವೆಂಕಟೇಶ್ ಕುಂಪಲ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.