ಅಪ್ರಾಪ್ತ ಬಾಲಕನಿಂದ ಅಪಘಾತ: ಪೋಷಕರ ವಿರುದ್ಧ ಮೊಕದ್ದಮೆ

Update: 2021-03-14 15:59 GMT

ಹಿರಿಯಡ್ಕ, ಮಾ.14: ದೂಪದಕಟ್ಟೆ ಕ್ರಾಸ್ ಬಳಿ ಮಾ.11ರಂದು ಲೂನಾ ಚಲಾಯಿಸಿಕೊಂಡು ಬಂದು ಟೆಂಪೋ ಟ್ರಾವೆಲರ್‌ಗೆ ಢಿಕ್ಕಿ ಹೊಡೆದು ಅಪಘಾತಕ್ಕೆ ಕಾರಣನಾದ ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ತೀವ್ರವಾಗಿ ಗಾಯಗೊಂಡ ಲೂನಾ ಸವಾರ ರಮಿತ್ (14) ಮಣಿಪಾಲ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹರಿಖಂಡಿಕೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದಾಗ ಟೆಂಪೋ ಟ್ರಾವೆಲರ್‌ಗೆ ಪೆರ್ಡೂರು ಕಡೆಯಿಂದ ಹರಿಖಂಡಿಕೆ ಕಡೆಗೆ ಹೋಗುತ್ತಿದ್ದ ಲೂನಾ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಅಪಘಾತಕ್ಕೆ ಕಾರಣನಾದ ಬಾಲಕ ಮತ್ತು ಆತನಿಗೆ ಲೂನಾ ನೀಡಿದ ಪೋಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News