ಅಮೆಮ್ಮಾರ್ ಮಸೀದಿ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಫರಂಗಿಪೇಟೆ: ಬದ್ರಿಯಾ ಜುಮ್ಮಾ ಮಸೀದಿ ಅಮೆಮ್ಮಾರ್ ಇದರ ವಾರ್ಷಿಕ ಮಹಾಸಭೆ ಮತ್ತು 2021-22 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ರವಿವಾರ ಮದರಸದ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು.
ಮಸೀದಿಯ ಖತೀಬ್ ಅಬ್ದುಲ್ ಲತಿಫ್ ಹನೀಫಿ ದುವಾ ಮತ್ತು ಪ್ರಾಸ್ತಾವಿಕ ಮಾತನಾಡಿದರು. ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ವಾರ್ಷಿಕ ವರದಿ ವಾಚಿಸಿದರು.
2021-22 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉಮರಬ್ಬ ಎ.ಎಸ್.ಬಿ, ಉಪಾಧ್ಯಕ್ಷರಾಗಿ ಅಬ್ದುಲ್ ಕಾದರ್ ಎಫ್. ಎ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಉಸ್ತಾದ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಶಾಫಿ, ಕೋಶಾಧಿಕಾರಿಯಾಗಿ ರಝಾಕ್, ಲೆಕ್ಕ ಪರಿಶೋದಕರಾಗಿ ಬಶೀರ್ ತಂಡೇಲ್, ಸದಸ್ಯರಾಗಿ ಹೈದರ್, ಇಕ್ಬಾಲ್ ಜಿ, ಜಮಾಲ್, ಇಬ್ರಾಹಿಂ, ಸಿದ್ದೀಕ್ ಕೆ, ಅಬ್ದುಲ್ ಕುಂಞಿ, ಹನೀಫ್, ಉಸ್ಮಾನ್, ಅಬ್ದುಲ್ ಕಾದರ್ ಅವರನ್ನು ಆಯ್ಕೆ ಮಾಡಲಾಯಿತು.