ಚೀನಾ ವಿರುದ್ಧ ತಡೆ ನಿರ್ಮಿಸಲು ಏಶ್ಯ ಪ್ರವಾಸ: ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಹೊನೊಲುಲು

Update: 2021-03-14 18:41 GMT

(ಅಮೆರಿಕ), ಮಾ. 14: ಅಮೆರಿಕದ ಮಿತ್ರರೊಂದಿಗಿನ ಸೇನಾ ಸಹಕಾರವನ್ನು ಹೆಚ್ಚಿಸಲು ಹಾಗೂ ಚೀನಾದ ವಿರುದ್ಧ ‘ಸದೃಢ ತಡೆ’ಯೊಂದನ್ನು ನಿರ್ಮಿಸಲು ಏಶ್ಯಕ್ಕೆ ಪ್ರವಾಸ ಕೈಗೊಳ್ಳುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡೆ ಆಸ್ಟಿನ್ ಶನಿವಾರ ಹೇಳಿದ್ದಾರೆ.

ಅಮೆರಿಕದ ರಕ್ಷಣಾ ಇಲಾಕೆ ಪೆಂಟಗನ್‌ನ ಮುಖ್ಯಸ್ಥರಾಗಿ ತನ್ನ ಮೊದಲ ವಿದೇಶ ಯಾತ್ರೆಯನ್ನು ಆಸ್ಟಿನ್ ಹವಾಯಿ ಮೂಲಕ ಆರಂಭಿಸಿದ್ದಾರೆ. ಹಿಂದೂ ಮಹಾಸಾಗರ-ಪೆಸಿಫಿಕ್ ವಲಯಕ್ಕಾಗಿನ ಅಮೆರಿಕದ ಸೇನಾ ಕಮಾಂಡ್‌ನ ಪ್ರಧಾನ ಕಚೇರಿ ಹವಾಯಿಯಲ್ಲಿದೆ.

‘‘ನನ್ನ ಈ ವಿದೇಶ ಪ್ರವಾಸವು ನಮ್ಮ ಮಿತ್ರರು ಮತ್ತು ಭಾಗೀದಾರರನ್ನು ಭೇಟಿಯಾಗುವುದಕ್ಕಾಗಿ’’ ಎಂದು ಅವರು ಹೇಳಿದರು. ಅಮೆರಿಕವು ತನ್ನ ಗಮನವನ್ನು ಮಧ್ಯಪ್ರಾಚ್ಯದಲ್ಲಿನ ತೀವ್ರವಾದದ ವಿರುದ್ಧದ ಹೋರಾಟದ ಮೇಲೆ ಕೇಂದ್ರೀಕರಿಸಿದ್ದರೆ, ಚೀನಾವು ತನ್ನ ಸೇನೆಯನ್ನು ಅಗಾಧ ವೇಗದಲ್ಲಿ ಆಧುನೀಕರಿಸುತ್ತಿದೆ’’ ಎಂದು ಅವರು ಹೇಳಿದರು.

‘‘ನಾವು ಹೊಂದಿದ್ದ ಆ ಸ್ಪರ್ಧಾತ್ಮಕ ಮೇಲುಗೈಯಲ್ಲಿ ಈಗ ಕುಸಿತವಾಗಿದೆ. ಆದರೂ, ಈಗಲೂ ನಾವೇ ಮೇಲುಗೈ ಹೊಂದಿದ್ದೇವೆ. ಮುಂದಕ್ಕೆ ನಾವು ಆ ಮೇಲುಗೈಯನ್ನು ಹೆಚ್ಚಿಸಲಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News