ಕಿನ್ಯ ಕೂಟು ಝಿಯಾರತ್ ಕಾರ್ಯಕ್ರಮ ಉದ್ಘಾಟನೆ
ಉಳ್ಳಾಲ, ಮಾ.15: ಕಿನ್ಯದ ಹಝ್ರತ್ ಹುಸೈನ್ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ ರವಿವಾರ ಆರಂಭಗೊಂಡಿತು.
ಸೈಯದ್ ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪದೇಪದೆ ಮಸೀದಿ ಖತೀಬ್, ಮುದರ್ರಿಸ್ ಗಳ ಮದ್ರಸ ಅಧ್ಯಾಪಕರ ಬದಲಾವಣೆ ಮಾಡುವುದು ಸರಿಯಲ್ಲ. ಇದು ಮದ್ರಸ, ದರ್ಸ್ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದರು.
ಕಿನ್ಯ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಪತ್ತಾಹ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿಯ ಕಚೇರಿ, ಅಂಗ ಶುದ್ದಿ ಕಟ್ಟಡವನ್ನು ಉದ್ಘಾಟಿಸಲಾಯಿತು.
ಸೈಯದ್ ಬಾತಿಶ್ ತಂಙಳ್, ಸದ್ ರ್ ಫಾರೂಕ್ ದಾರಿಮಿ, ಜಮಾಅತ್ ಅಧ್ಯಕ್ಷ ಇಸ್ಮಾಯೀಲ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಸಾದುಕುಂಞಿ ಸಾಗ್ ಬಾಗ್, ಉಪಾಧ್ಯಕ್ಷ ಇಬ್ರಾಹೀಂ ಕೂಡಾರ, ಕುಂಞಿ ಹಾಜಿ, ಅಶ್ರಫ್ ಮಾರಾಠಿಮೂಲೆ, ಜೊತೆ ಕಾರ್ಯದರ್ಶಿ ಇಸ್ಮಾಯೀಲ್ ಸಾಗ್, ಹಮೀದ್ ಕಿನ್ಯ, ಮಾಜಿ ಅಧ್ಯಕ್ಷ ರಾದ ಹುಸೈನ್ ಕುಂಞಿ ಹಾಜಿ, ಸಾಧುಕುಂಞಿ ಮಾಸ್ಟರ್ , ಮಾಜಿ ಪ್ರಧಾನ ಕಾರ್ಯದರ್ಶಿ ಅಬೂ ಸಾಲಿ ಹಾಜಿ, ಮಾಜಿ ಉಪಾಧ್ಯಕ್ಷ ಇಸ್ಮಾಯೀಲ್, ತಬೂಕು ದಾರಿಮಿ, ವಕ್ಫ್ ಅಧಿಕಾರಿ ಅಬೂಬಕರ್ ಮೋಂಟುಗೋಳಿ ಮೊದಲಾದವರು ಉಪಸ್ಥಿತರಿದ್ದರು
ಇಸ್ಮಾಯೀಲ್ ಹಾಜಿ ಸ್ವಾಗತಿಸಿದರು.