ಈಜು ಸ್ಪರ್ಧೆ: ಯೆನೆಪೊಯ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ
Update: 2021-03-15 15:40 IST
ಮಂಗಳೂರು, ಮಾ.15: ಇತ್ತೀಚೆಗೆ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಯೆನೆಪೊಯ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವಿಂಧ್ಯಾ ಜಿ. ಭಂಡಾರಿ ಮತ್ತು ಆ್ಯಶೆಲ್ ಲಿಯಾನ್ ಡಿಸಿಲ್ವ ಆರು ಚಿನ್ನದ ಪದಕ ಹಾಗೂ ಎರಡು ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದ್ದಾರೆ. ಆ ಮೂಲಕ ಇವರಿಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ರಾಜೇಶ್ ಆ್ಯಂಟನಿ ಬೆಂಗ್ರೆ ಮತ್ತು ಯಶೋದಾ ಜಿ. ಭಂಡಾರಿ ತರಬೇತು ನೀಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಯೆನೆಪೊಯ ಪಿಯು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮೆಕ್ರಿಯತ್, ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೀದ್, ಅಕಾಡಮಿಕ್ ಕೋಆರ್ಡೀನೇಟರ್ ರವಿ ಗೋಯೆಲ್ ಉಪಸ್ಥಿತರಿದ್ದರು.