×
Ad

ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

Update: 2021-03-15 18:33 IST

ಮಂಗಳೂರು, ಮಾ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್ ಪಿನ್ನೆ ಕಲಾವಿದಮ್ಮಾರೊ ಕೂಟ, ದೇರಳಕಟ್ಟೆ)ಯ ಸಹಕಾರದಲ್ಲಿ ಮಾ.27ರಂದು ಉಳ್ಳಾಲ ಅಳೇಕಲದ ಮದನಿ ಪಿಯು ಕಾಲೇಜಿನಲ್ಲಿ ನಡೆಯಲಿರುವ ಉಳ್ಳಾಲ ತಾಲೂಕು ಪ್ರಥಮ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಆಮಂತ್ರಣ ಪತ್ರವನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಕೆ.ಎಂ.ಮುನೀರ್ ಬಾವಾ ಸೋಮವಾರ ಅಕಾಡಮಿಯ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಉಳ್ಳಾಲ ತಾಲೂಕು ಘೋಷಣೆಯಾದ ಬಳಿಕ ನಡೆಯುವ ಪ್ರಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ ಇದಾಗಿದೆ. ಈ ಸಮ್ಮೇಳನವನ್ನು ಯಶಸ್ಸಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಈ ಸಂದರ್ಭ ಅಕಾಡಮಿಯ ರಿಜಿಸ್ಟಾರ್ ಪೂರ್ಣಿಮಾ,  ಮೇಲ್ತೆನೆಯ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ಅಶೀರುದ್ದೀನ್ ಸಾರ್ತಬೈಲ್, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಸಂಚಾಲಕ ಮುಹಮ್ಮದ್ ಬಾಷಾ ನಾಟೆಕಲ್, ಉಪಾಧ್ಯಕ್ಷ ಇಬ್ರಾಹಿಂ ಖಲೀಲ್ ಕಲ್ಲಾಪು, ಕಾರ್ಯಕಾರಿ ಸಮಿತಿ ಸದಸ್ಯರಾದ ಇಸ್ಮಾಯೀಲ್ ಟಿ. ಹಂಝ ಮಲಾರ್, ರಿಯಾಝ್ ಮಂಗಳೂರು, ಸಾಮಾಜಿಕ ಕಾರ್ಯಕರ್ತರಾದ ಮುಸ್ತಫಾ ಉಳ್ಳಾಲ, ಹಾರಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News