×
Ad

ಕೋಡಿ ಬ್ಯಾರೀಸ್ ಕಾಲೇಜಿ‌ನಲ್ಲಿ ಲಲಿತ ಕಲಾ ಪ್ರಾತ್ಯಕ್ಷಿಕೆ

Update: 2021-03-15 20:13 IST

ಕುಂದಾಪುರ, ಮಾ.15: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಲಲಿತ ಕಲೆಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಬಹುಮುಖ ಪ್ರತಿಭೆ ಹರ್ಷಾ ಆಚಾರ್ ಕೋಟೇಶ್ವರ, ಟ್ರೆಡ್ ಆರ್ಟ್, ಏಕಪಾತ್ರಾಭಿನಯ, ಕರೋಕೆ ಗಾಯನ, ಜಾನಪದ ಗೀತೆ, ಉಭಯತಿಟ್ಟು ಯಕ್ಷಗಾನದ ಹೆಜ್ಜೆಯೊಂದಿಗೆ ಅಪೂರ್ವ ಸಂಭಾಷಣೆಯ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ರೆಹಮಾನ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶು ಪಾಲ ಡಾ.ಶಮೀರ್, ಲಲಿತ ಕಲಾರಂಗದ ಸಂಯೋಜಕ ಡಾ.ಸಂದೀಪ ಕುಮಾರ ಶೆಟ್ಟಿ, ಲಲಿತಕಲಾರಂಗದ ವಿದ್ಯಾರ್ಥಿ ಕಾರ್ಯದರ್ಶಿ ಕಾವ್ಯಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ವಿಜಯ್ ಕುಮಾರ ಅತಿಥಿ ಪರಿಚಯಿಸಿದರು. ವಿದ್ಯಾರ್ಥಿ ಯಲ್ಲಪ್ಪ ಸ್ವಾಗತಿಸಿದರು. ವಿದ್ಯಾರ್ಥಿನಿ ನಮಿತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News