ದೆಹಲಿ ಕರ್ನಾಟಕ ಸಂಘದ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿ

Update: 2021-03-15 15:07 GMT

ಮಂಗಳೂರು, ಮಾ.15: ದೆಹಲಿ ಕರ್ನಾಟಕ ಸಂಘದಿಂದ ನಡೆಯುವ ವಾರ್ಷಿಕ ಆಟೋಟ ಸ್ಪರ್ಧೆಗಳಲ್ಲಿ ಒಂದಾದ ಕ್ರಿಕೆಟ್ ಪಂದ್ಯಾವಳಿಯನ್ನು ಮಾ.13 ಮತ್ತು 14ರಂದು ದೆಹಲಿಯ ತಾಲ್ಕತೋರ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಪಂದ್ಯಾವಳಿಯಲ್ಲಿ ನಾಡಪ್ರಭು ಕೆಂಪೇಗೌಡ ಫೌಂಡೇಶನ್, ಜೆ.ಎಸ್.ಎಸ್. ಚಾಲೇಂಜರ್ಸ್‌, ಗೆಳೆಯರ ಬಳಗ, ಬೆಳ್ಳಿಯಪ್ಪಾಸ್ ಗ್ರೂಪ್-ಬಿ, ಕನ್ನಡ ಸಿರಿ ಗೆಳೆಯರು-2, ಕರ್ನಾಟಕ ಅಡ್ವೋಕೇಟ್ಸ್, ಶಿವ ಸಾಯಿ ಗ್ರೂಪ್ ಕ್ರಿಕೆಟ್ ಟೀಮ್, ಜನಕಪುರಿ ಕನ್ನಡ ಕೂಟ ಕ್ರಿಕೆಟ್ ಕ್ಲಬ್, ದೆಹಲಿ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್, ಹೊಯ್ಸಳ ಕ್ರಿಕೆಟರ್ಸ್‌ ಗುರ್‌ಗಾಂವ್, ಜೆ.ಎಸ್.ಎಸ್. -ವಾರಿಯರ್ಸ್, ದೆಹಲಿ ತುಳುಸಿರಿ, ಕನ್ನಡ ಸಿರಿ ಗೆಳೆಯರು-1, ಕರ್ನಾಟಕ ಭವನ ಜೂನಿಯರ್ ಕ್ರಿಕೆಟ್ ಟೀಮ್ ಮತ್ತು ಬೆಳ್ಳಿಯಪ್ಪಾಸ್ ಗ್ರೂಪ್-ಎ ಸೇರಿದಂತೆ ಒಟ್ಟು 15 ತಂಡಗಳು ಭಾಗವಹಿಸಿದವು.

ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ‘ಕನ್ನಡ ಸಿರಿ ಗೆಳೆಯರು-2’ ತಂಡದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಬಾರಿ ಬೆಳ್ಳಿಯಪ್ಪಾಸ್ ಗ್ರೂಪ್-ಎ ತಂಡವು ದೆಹಲಿ ಕರ್ನಾಟಕ ಸಂಘದ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹೊಸದಾಗಿ ಬಂದಂತಹ ಶಿವ ಸಾಯಿ ಗ್ರೂಪ್ ಕ್ರಿಕೆಟ್ ಟೀಮ್ ರನ್ನರ್ ಅಪ್ ಆಗಿ ಹೊರಬಂತು.

ಬೆಳ್ಳಿಯಪ್ಪಾಸ್ ಗ್ರೂಪ್-ಎ ತಂಡದ ನಾಯಕ ಸಿದ್ದಪ್ಪ ಕೆ.ಸಿ. ಅವರ ಅದ್ಬುತ ಬೌಲಿಂಗ್ ಪ್ರದರ್ಶನದಿಂದ ಪಂದ್ಯ ಪುರುಷೋತ್ತಮರೆನಿಸಿಕೊಂಡರು. ಬೆಳ್ಳಿಯಪ್ಪಾಸ್ ಗ್ರೂಪ್-ಎ ತಂಡದ ನಾಯಕ ಸಿದ್ದಪ್ಪಕೆ.ಸಿ. ಬೆಸ್ಟ್ ಬೌಲರ್ ಮತ್ತು ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು. ಹಾಗೆಯೇ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ವಿನೋದ್ ತನ್ನದಾಗಿಸಿಕೊಂಡರು.

ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ, ಉಪಾಧ್ಯಕ್ಷ ಡಾ. ಅವನೀಂದ್ರನಾಥ್ ರಾವ್, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ, ಖಜಾಂಚಿ ಆಶಾಲತಾ, ಕ್ರೀಡಾ ಸಮಿತಿಯ ಅಧ್ಯಕ್ಷ ಡಾ.ಎಂ.ಎಸ್. ಶಶಿಕುಮಾರ್, ಸಂಚಾಲಕ ಸಂತೋಷ ಜೆ., ಜಂಟಿ ಕಾರ್ಯದರ್ಶಿಗಳಾದ ರಾಧಾಕೃಷ್ಣ ಮತ್ತು ಪೂಜಾ ರಾವ್, ಕಾರ್ಯಕಾರಿ ಸಮಿತಿಯ ಸದಸ್ಯ ಶಿವಪ್ಪ ಎಂ., ಎನ್.ಆರ್. ಶ್ರೀನಾಥ್, ಶೋಭಾ ಗೌಡ, ಟಿ.ಎಂ. ಮೈಲಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News