ಅಂತರ್ ಜಿಲ್ಲಾ ಕ್ರಿಕೆಟ್; ಕೊಡಗು ವಿರುದ್ಧ ಉಡುಪಿಗೆ 153 ರನ್‌ಗಳ ಜಯ
Update: 2021-03-15 21:29 IST
ಮಂಗಳೂರು, ಮಾ.15: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ 16 ವರ್ಷದೊಳಗಿನವರ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು, ಕೊಡಗು ಜಿಲ್ಲಾ ತಂಡದ ವಿರುದ್ಧ 153 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ಮಂಗಳೂರಿನ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಡುಪಿ ತಂಡದ ನಾಯಕ ಅಶೀಷ್ ನಾಯಕ್ ಅವರ ಭರ್ಜರಿ ಬೌಲಿಂಗ್ ವಿಜಯದಲ್ಲಿ ಪ್ರಧಾನ ಪಾತ್ರ ವಹಿಸಿತು. ಅವರು ಒಂದೇ ಒಂದು ರನ್ ನೀಡದೇ ಎದುರಾಳಿ ತಂಡದ ಐದು ವಿಕೆಟ್‌ಗಳನ್ನು ಉರುಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿ ಜಿಲ್ಲಾ ತಂಡ ನಿಶ್ಚಿತ್ (40), ಆಕಾಶ್ (27), ಆಕ್ಷಯ್, ಆರ್ಯನ್, ಆಶೀಷ್ ತಲಾ 16 ರನ್‌ಗಳ ಬ್ಯಾಟಿಂಗ್ ನೆರವಿನಿಂದ 182 ರನ್‌ಗಳ ಮೊತ್ತವನ್ನು ಗಳಿಸಿದರೆ, ಕೊಡಗು ಜಿಲ್ಲಾ ತಂಡ ಉಡುಪಿ ತಂಡದ ನಾಯಕ ಆಶೀಷ್‌ರವರ ಅಪೂರ್ವ ಸ್ಪಿನ್ ಮೋಡಿಗೆ ಬಲಿಯಾಗಿ ಕೇವಲ 29 ರನ್‌ಗಳಿಗೆ ಆಲೌಟಾಯಿತು.