×
Ad

ಕೋಟೆಕಾರ್: ಮರ್ಕಝುಲ್ ಹಿದಾಯ ವಿದ್ಯಾರ್ಥಿಗಳಿಗೆ ಸನ್ಮಾನ

Update: 2021-03-15 23:01 IST

ಕೋಟೆಕಾರ್, ಮಾ.15:ಸಾಧನೆಗೆ ಬಡತನ ಮತ್ತಿತರ ವಿಚಾರಗಳು ಎಂದಿಗೂ ಅಡ್ಡಿಯಾಗಬಾರದು. ಸಾಧಿಸಲು ದೃಢವಾದ ಮನಸ್ಸು ಇರಬೇಕು. ಆವಾಗ ಯಶಸ್ಸು ಸಾಧ್ಯ ಎಂದು ನಾಟೆಕಲ್‌ನ ಸರಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಂಶುಪಾಲ ಎನ್‌ಎಸ್ ಉಮರ್ ಮಾಸ್ಟರ್ ಹೇಳಿದರು.

ಶೇ.100 ಫಲಿತಾಂಶ ದಾಖಲಿಸಿದ ಕೋಟೆಕಾರ್‌ನ ಮರ್ಕಝುಲ್ ಹಿದಾಯ ಮದ್ರಸ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಫಾರೂಕ್ ಯು., ಮುಖ್ಯ ಶಿಕ್ಷಕಿ ಮುಮ್ತಾಝ್ ಬೇಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News