ಈಜು ಸ್ಪರ್ಧೆ: ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ನಾರಾಯಣ ಖಾರ್ವಿ
Update: 2021-03-15 23:03 IST
ಮಂಗಳೂರು, ಮಾ.15: ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಶನ್(ರಿ.) ಬೆಂಗಳೂರಿನ ದಿ ಕ್ಯೂಬ್ ಈಜುಕೊಳದಲ್ಲಿ ನಡೆಸಿದ ಹಿರಿಯರ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ, 50 ಮೀ ಬಟರ್ ಪ್ಲೈನಲ್ಲಿ ಚಿನ್ನದ ಪದಕ, 100 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 50 ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದ ನಾರಾಯಣ ಖಾರ್ವಿ ಕಂಚುಗೋಡು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಅರಬ್ಬೀ ಸಮುದ್ರದಲ್ಲಿ ತಣ್ಣೀರುಬಾವಿಯ ಬಳಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1 ಕಿ.ಮೀ. ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದರು.
ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರು ಎರಡು ಪುಸ್ತಕ ಮತ್ತು 450ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಪ್ರಸ್ತುತ ಬಂಟ್ವಾಳ ತಾಲೂಕಿನ ಕಲ್ಮಂಜ ಹಿ.ಪ್ರಾ.ಶಾಲೆಯಲ್ಲಿ ಜಿ.ಪಿ.ಟಿ. ಶಿಕ್ಷಕರಾಗಿದ್ದಾರೆ.