×
Ad

ಕಾರ್ಕಳ : ಹಲ್ಲೆ ಪ್ರಕರಣ ; ಬಜರಂಗದಳದ ಮೂವರು ಕಾರ್ಯಕರ್ತರು ಸೆರೆ

Update: 2021-03-16 22:49 IST

ಕಾರ್ಕಳ : ಹಿಂದೂ ಜಾಗರಣ ವೇದಿಕೆಯ ಅನಿಲ್‌ ಪೂಜಾರಿ ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಮೂವರು ಕಾರ್ಯಕರ್ತರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ನಿಟ್ಟೆ ಗ್ರಾಮದ ನಿವಾಸಿ ಬಜರಂಗದಳದ ತಾಲೂಕು ಸಂಚಾಲಕ ಸುನಿಲ್‌, ವಲಯ ಸಂಚಾಲಕ ಶರತ್‌ ಹಾಗೂ ತಾಲೂಕು ಗೋರಕ್ಷಾ ಪ್ರಮುಖ್‌ ಪ್ರಸಾದ್‌ ಬಂಧಿತರು.

ರವಿವಾರ ರಾತ್ರಿ ನಿಟ್ಟೆ ಗ್ರಾಮದ ಅನಿಲ್‌ ಪೂಜಾರಿ ಅವರ ಮನೆಗೆ ನುಗ್ಗಿ ತಲವಾರಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ವಾಯಿ ಸಮೀಪ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ಆಯುಧ ಸಹಿತ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಡಿವೈಎಸ್‌ಪಿ ಭರತ್‌ ರೆಡ್ಡಿ ಹಾಗೂ ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಹಾಗೂ ನಗರ ಠಾಣೆ ಎಸ್‌ಐ ಮಧು ಬಿ.ಇ. ತಂಡ ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News