ಕಾರು ಪಾರ್ಕಿಂಗ್ ಮಾಡಿದ ಸ್ಥಳವನ್ನು ಬಿಟ್ಟು ಡಾಮರೀಕರಣ
Update: 2021-03-17 11:27 IST
ಬಂಟ್ವಾಳ, ಮಾ.17: ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿದ ಅಷ್ಟು ಜಾಗವನ್ನು ಬಿಟ್ಟು ಡಾಮರ್ ಮಾಡುತ್ತಾ ಮುಂದುವರಿದಿರುವ ದೃಶ್ಯ ಬಂಟ್ವಾಳ ತಾಲೂಕಿನ ವಿಟ್ಲ ಮುಖ್ಯ ರಸ್ತೆಯಲ್ಲಿ ಕಂಡು ಬಂದಿದೆ.
ವಿಟ್ಲದ ಮುಖ್ಯ ರಸ್ತೆಗೆ ಡಾಮರ್ ಹಾಕುವ ಕಾಮಗಾರಿ ನಡೆಯುತ್ತಿದೆ. ಎಲಿಮೆಂಟರಿ ಶಾಲೆಯ ಮುಂಭಾಗ ಈ ರಸ್ತೆಗೆ ತಾಗಿ ಕೊಂಡು ಕಾರೊಂದನ್ನು ಪಾರ್ಕಿಂಗ್ ಮಾಡಲಾಗಿದೆ. ಕಾರು ನಿಂತಿರುವ ಅಷ್ಟು ಜಾಗವನ್ನು ಬಿಟ್ಟು ಡಾಮರ್ ಹಾಕುವ ಕಾಮಗಾರಿ ಮುಂದುವರಿಸಲಾಗಿದೆ.
ಈ ದೃಶ್ಯದ ಫೋಟೋ ಮತ್ತು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದ ಹಾಸ್ಯ ಮತ್ತು ಆಕ್ರೋಶ ವ್ಯಕ್ತವಾಗಿದೆ. ಯೂಟ್ಯೂಬ್ ಅಥವಾ ಇತರ ವೀಡಿಯೊಗಳಲ್ಲಿ ನೋಡುತ್ತಿದ್ದ ದೃಶ್ಯ ಇಂದು ನಮ್ಮ ಊರಿನಲ್ಲೇ ನಡೆದಿದೆ ಎಂದು ವ್ಯಕ್ತಿಯೊಬ್ಬರು ವೀಡಿಯೊ ಚಿತ್ರಿಕರಿಸುತ್ತಾ ಹೇಳಿದ್ದಾರೆ.