×
Ad

ದಿ.ಸುರೇಶ್ ಶೆಟ್ಟಿಗೆ ನುಡಿ ನಮನ, ಶ್ರದ್ಧಾಂಜಲಿ ಸಭೆ

Update: 2021-03-17 16:47 IST

ಮಂಗಳೂರು : ಇತ್ತೀಚೆಗೆ ನಿಧನರಾದ ಲಯನ್ಸ್ ಕ್ಲಬ್ ಮಂಗಳೂರು ಅಶೋಕ್ ನಗರದ ಸದಸ್ಯ, ಮಾಜಿ ಕಾರ್ಪೊರೇಟರ್, ಪರಿಸರ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಲಯನ್ ಸುರೇಶ್ ಎ, ಶೆಟ್ಟಿ ಅವರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಸಭೆ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿ ನುಡಿ ನಮನ ಸಲ್ಲಿಸಿದ ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಸುರೇಶ್ ಶೆಟ್ಟಿಯವರ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಿ, ಅವರ ಗುಣಗಳ ಶೇಕಡ 10 ರಷ್ಟಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗೋಣ ಎಂದು ಕರೆ ನೀಡಿದರು.

ಮಾಜಿ ಮಹಾಪೌರರಾದ ಶಶಿಧರ್ ಶೆಟ್ಟಿ ಮಾತನಾಡಿ ಸುರೇಶ್ ಶೆಟ್ಟಿಯವರೊಂದಿಗಿನ ತಮ್ಮ ದೀರ್ಘ ಕಾಲದ ಒಡನಾಟ ಹಾಗೂ ಸಮಾಜದ ಒಳಿತಿನ ಬಗ್ಗೆ ಅವರಿಗಿದ್ದ ತುಡಿತದ ಬಗ್ಗೆ ನೆನಪುಗಳನ್ನು ಮೆಲುಕು ಹಾಕಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸೇವಾ ದಳದ ಬಿ.ಪ್ರಭಾಕರ ಶ್ರೀಯಾನ್, ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ್ ಅಭಿಯಾನದ ಆಯೋಜಕರಾದ ಉಮಾನಾಥ್ ಕೋಟೆಕಾರ್, ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‌ರಾಜ್ ಆಳ್ವ ಮಾತನಾಡಿದರು.

ಲಯನ್ಸ್ ಜಿಲ್ಲೆ 213ಡಿ ಯ ಪರವಾಗಿ ಸುರೇಶ್ ಶೆಟ್ಟಿಯವರ ಸಂಬಂಧಿ ಪೂರ್ವ ಜಿಲ್ಲಾ ರಾಜ್ಯಪಾಲರಾದ ಲ! ದೇವದಾಸ ಭಂಡಾರಿ, ಲಯನ್ಸ್ ನಿಕಟಪೂರ್ವ ಜಿಲ್ಲಾ ರಾಜ್ಯಪಾಲರಾದ ರೊನಾಲ್ಡ್ ಐಸಾಕ್ ಗೋಮ್ಸ್, ಪ್ರಥಮ ಜಿಲ್ಲಾ ಉಪ ರಾಜ್ಯಪಾಲರಾದ ವಸಂತ್ ಕುಮಾರ್ ಶೆಟ್ಟಿ, ಪೂರ್ವ ಜಿಲ್ಲಾ ರಾಜ್ಯಪಾಲರಾದ ಲ! ಉದಯ್ ಶಂಕರ್ ಶೇಟ್, ಕೆ.ಸಿ. ಪ್ರಭು ಹಾಗೂ ಲ! ಶಶಿಧರ್ ಶೆಟ್ಟಿ ನುಡಿ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News