×
Ad

ಪೌರತ್ವ ಕಾಯಿದೆ, ಎನ್ ಆರ್ ಸಿ ಅನ್ವಯ ದಿಗ್ಬಂಧನ ಕೇಂದ್ರ ನಿರ್ಮಿಸಬೇಕೆಂಬ ನಿಬಂಧನೆಯಿಲ್ಲ: ಕೇಂದ್ರ

Update: 2021-03-17 18:14 IST

ಹೊಸದಿಲ್ಲಿ : ಪೌರತ್ವ ಕಾಯಿದೆ 1955 ಹಾಗೂ ಎನ್‍ಆರ್‍ಸಿ ಅನ್ವಯ ದಿಗ್ಬಂಧನ ಕೇಂದ್ರಗಳನ್ನು ನಿರ್ಮಿಸಬೇಕೆಂಬ ನಿಬಂಧನೆಯಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಬುಧವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

"ದಿಗ್ಬಂಧನ ಕೇಂದ್ರಗಳನ್ನು ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಅಕ್ರಮ ವಲಸಿಗರನ್ನು ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶೀಯರನ್ನು ಇರಿಸಲು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ನಿರ್ಮಿಸುತ್ತವೆ,'' ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಆದರೆ ರಾಜ್ಯಗಳಲ್ಲಿ ಎಷ್ಟು ದಿಗ್ಬಂಧನ ಕೇಂದ್ರಗಳಿವೆ ಎಂಬ ಮಾಹಿತಿಯನ್ನು ಕೇಂದ್ರ ಸಂಗ್ರಹಿಸುವುದಿಲ್ಲ ಎಂದೂ ಉತ್ತರದಲ್ಲಿ ತಿಳಿಸಲಾಗಿದೆ.

ರಾಜ್ಯಸಭೆಯಲ್ಲಿ ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ರಾಷ್ಟ್ರೀಯ ಮಟ್ಟದಲ್ಲಿ ಎನ್‍ಆರ್‍ಸಿ ಸಿದ್ಧಪಡಿಸುವ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದರು.

ತಮ್ಮ ಜೈಲು ಶಿಕ್ಷೆ ಅವಧಿಯನ್ನು ಪೂರ್ಣಗೊಳಿಸಿರುವ ವಿದೇಶಿ ನಾಗರಿಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಹಾಗೂ ಅವರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ತನಕ ಸೂಕ್ತ ಸ್ಥಳದಲ್ಲಿರಿಸಿ ಅವರ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿರುವ ಕುರಿತು ಕೂಡ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News