×
Ad

ಮಾ.18ರಂದು ವಿಮಾ ನೌಕರರಿಂದ ಮುಷ್ಕರ

Update: 2021-03-17 19:35 IST

ಉಡುಪಿ, ಮಾ.17: ಎಲ್‌ಐಸಿಯ ಶೇರುಗಳನ್ನು ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡುವ, ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ.49ರಿಂದ ಶೇ.74ಕ್ಕೆ ಏರಿಸುವ ಹಾಗೂ ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಸಂಸ್ಥೆಗಳ ಖಾಸಗೀಕರಣ ಪ್ರಸ್ತಾಪದ ವಿರುದ್ಧ ಎಲ್‌ಐಸಿಯ ನೌಕರರು ಮತ್ತು ಅಧಿಕಾರಿಗಳು ದೇಶದಾದ್ಯಂತ ಮಾ.18ರಂದು ಒಂದು ದಿನದ ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಈ ಮುಷ್ಕರಕ್ಕೆ ಅಖಿಲ ಭಾರತ ವಿಮಾ ನೌಕರರ ಸಂಘ ಮತ್ತು ಉಳಿದ ಕಾರ್ಮಿಕ ಸಂಘಟನೆಗಳು (ಎಐಐಇಎ) ಜಂಟಿಯಾಗಿ ಕರೆ ನೀಡಿದ್ದು, ಸರಕಾರದ ಈ ನಿರ್ಧಾರಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿವೆ. ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲದ ಈ ನೀತಿಗಳನ್ನು ಹಿಂಪಡೆಯುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News