×
Ad

ಮಾ.18: ಗಣಕ ಶಾಸ್ತ್ರ ಕಾರ್ಯಾಗಾರ

Update: 2021-03-17 19:36 IST

ಉಡುಪಿ, ಮಾ.17: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಗಣಕ ಶಾಸ್ತ್ರ ಮತ್ತು ಹಿಂದಿ ಉಪನ್ಯಾಸಕರ ವೇದಿಕೆಗಳ ವತಿಯಿಂದ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಾಗಾರವು ಮಾ.18ರ ಗುರುವಾರ ಉಡುಪಿ ಪುತ್ತೂರು ಹನುಮಂತ ನಗರ ರಾಷ್ತ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಸೈಲಸ್ ಮಹೇಶ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಕಾರ್ಯಾಗಾರವನ್ನು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟೀಮನಿ ಅವರು ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರವೀಂದ್ರ ಕೆ.ವಿ. ಹಾಗೂ ಮಂಗಳೂರು ಕಪಿತಾನಿಯೋ ಪದವಿ ಪೂರ್ವ ಕಾಲೇಜಿನ ಅನಿತಾ ಎಂ.ಎಸ್.ಡೇಸಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News