ಬಂಗಾಳದಲ್ಲಿ ಟಿಎಂಸಿ ಪರ ಪ್ರಚಾರ ಮಾಡಬೇಡಿ: ಶರದ್ ಪವಾರ್, ತೇಜಸ್ವಿ ಯಾದವ್ ಗೆ ಕಾಂಗ್ರೆಸ್ ಸಂಸದನ ಪತ್ರ
Update: 2021-03-17 20:57 IST
ಕೋಲ್ಕತಾ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷ( ಎನ್ ಸಿಪಿ)ಮುಖ್ಯಸ್ಥ ಶರದ್ ಪವಾರ್ ಹಾಗೂ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖಂಡ ತೇಜಸ್ವಿ ಯಾದವ್ ಗೆ ಪತ್ರ ಬರೆದಿರುವ ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಪ್ರದೀಪ್ ಭಟ್ಟಾಚಾರ್ಯ, ಮುಂಬರುವ ಪಶ್ಚಿಮಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪರ ಪ್ರಚಾರ ಮಾಡಬೇಡಿ ಎಂದು ವಿನಂತಿಸಿದ್ದಾರೆ.
“ಪ.ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ದ ರಾಜಕೀಯ ಹೋರಾಟ ನಡೆಸುತ್ತಿವೆ. ತಾರಾ ಪ್ರಚಾರಕರಾಗಿ ನಿಮ್ಮ ಉಪಸ್ಥಿತಿಯು ಪಶ್ಚಿಮಬಂಗಾಳದ ಸಾಮಾನ್ಯ ಮತದಾರರಿಗೆ ಗೊಂದಲವನ್ನು ಸೃಷ್ಟಿಸುತ್ತದೆ’’ ಎಂದು ಇಬ್ಬರಿಗೂ ಬರೆದ ಪತ್ರದಲ್ಲಿ ಭಟ್ಟಾಚಾರ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರದ ಮೈತ್ರಿ ಪಕ್ಷವಾಗಿದೆ. ಬಿಹಾರದಲ್ಲಿ ಆರ್ ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಈ ಪತ್ರವನ್ನು ಬರೆದಿದೆ.