×
Ad

​ಕಲ್ಲಿನ ಕೋರೆಗೆ ದಾಳಿ: ಪ್ರಕರಣ ದಾಖಲು

Update: 2021-03-17 20:59 IST

ಮಂಗಳೂರು, ಮಾ.17: ಬೊಂಡಂತಿಲ ಗ್ರಾಮದ ಸರ್ವೆ ನಂ.121ರ ಕಲ್ಲಿನ ಕೋರೆಯೊಂದಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋರೆಯಲ್ಲಿ ಪೊಲೀಸರು ಅಥವಾ ಪ್ರಾಧಿಕಾರದವರಿಗೆ ಮಾಹಿತಿ ನೀಡದೆ ಸ್ಫೋಟಕಗಳನ್ನು ಬಳಸಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ವಿನಾಯಕ ಬಾವಿಕಟ್ಟಿ, ಸಿಬ್ಬಂದಿ ಕಿರಣ, ಧನಂಜಯ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News