ಉಡುಪಿ ನಗರಸಭೆ ಪೌರಕಾರ್ಮಿಕರ ಸ್ವಚ್ಛತಾ ಜಾಥ
Update: 2021-03-17 21:10 IST
ಉಡುಪಿ, ಮಾ.17: ಉಡುಪಿ ನಗರಸಭೆ ವತಿಯಿಂದ ಪೌರಕಾರ್ಮಿಕರ ಸ್ವಚ್ಛತಾ ಜಾಥವನ್ನು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಾಥಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಚಾಲನೆ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಆರೋಗ್ಯಾಧಿಕಾರಿ ಕರುಣಾಕರ್ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ್ ಅಭಿಯಾನದ ಯೋಜನೆಯಡಿ ಸಾರ್ವಜನಿಕ ಪ್ಲಾಸ್ಟಿಕ್ ನಿಷೇಧ, ಹೋಮ್ ಕಾಂಪೋಸ್ಟ್ ಮಾನ್ಯುಯಲ್ ಸ್ಕಾವೆಂಜಿಗ್, ಪರಿಸರ ಮಾಲಿನ್ಯ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಈ ಜಾಥವನ್ನು ನಗರದಲ್ಲಿ ನಡೆಸಲಾಯಿತು.