ಜರ್ಝರಿತ ದೇಶ, ನಿರ್ವಸಿತ ಬದುಕು...

Update: 2021-03-17 15:56 GMT
ಸಾಂದರರ್ಭಿಕ ಚಿತ್ರ

ಡಮಾಸ್ಕಸ್ (ಸಿರಿಯ), ಮಾ. 17: ಸಿರಿಯದಲ್ಲಿ ಅಧ್ಯಕ್ಷ ಬಶರ್ ಅಸಾದ್ ಸರಕಾರದ ವಿರುದ್ಧ 2011 ಮಾರ್ಚ್‌ನಲ್ಲಿ ಆರಂಭಗೊಂಡ ಶಾಂತಿಯುತ ಪ್ರತಿಭಟನೆಗೆ 10 ವರ್ಷ ತುಂಬುತ್ತಿದೆ. ಆದರೆ, ಶಾಂತಿಯುತವಾಗಿ ಆರಂಭವಾದ ಜನಪ್ರಿಯ ಚಳವಳಿಯು ಕ್ಷಿಪ್ರವಾಗಿ ಪೂರ್ಣಪ್ರಮಾಣದ ಆಂತರಿಕ ಯುದ್ಧವಾಗಿ ಪರಿವರ್ತನೆಗೊಂಡಿತು.

 ಒಂದು ದಶಕದ ಅವಧಿಯ ಯುದ್ಧ ಮತ್ತು ಜರ್ಝರಿತ ದೇಶದ ಹೊರತಾಗಿಯೂ ಇರಾನ್ ಮತ್ತು ರಶ್ಯದ ಸೇನಾ ಬೆಂಬಲದಿಂದಾಗಿ ಅಸಾದ್ ಈಗಲೂ ಅಧಿಕಾರದಲ್ಲಿ ಗಟ್ಟಿಯಾಗಿ ಕುಳಿತಿದ್ದಾರೆ.

10 ವರ್ಷಗಳ ಯುದ್ಧವು ದೇಶದಲ್ಲಿ ಊಹಿಸಲಾಗದಷ್ಟು ವಿನಾಶವನ್ನು ಸೃಷ್ಟಿಸಿದೆ. ಸುಮಾರು ಐದು ಲಕ್ಷ ಜನರು ಸಾವಿಗೀಡಾಗಿದ್ದಾರೆ ಹಾಗೂ ಆಂತರಿಕ ಯುದ್ಧಕ್ಕಿಂತ ಮೊದಲಿದ್ದ 2.3 ಕೋಟಿ ಜನಸಂಖ್ಯೆಯ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ. ಈ ಪೈಕಿ 50 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿ ನೆರೆಯ ದೇಶಗಳಲ್ಲಿದ್ದಾರೆ.

2011ರಲ್ಲಿ ನಾವು ಸರಕಾರದ ವಿರುದ್ಧ ಯುದ್ಧ ಮಾಡುವಂಥ ಪರಿಸ್ಥಿತಿಯನ್ನು ಸರಕಾರ ಸೃಷ್ಟಿಸಿತು ಎಂದು ಹೋಮ್ಸ್ ಪ್ರಾಂತದ ಸಿರಿಯ ನಿರಾಶ್ರಿತರೊಬ್ಬರು ‘ಅಲ್ ಜಝೀರ’ದೊಂದಿಗೆ ಹೇಳಿದರು.

‘‘ಸಿರಿಯ ಸರಕಾರವು ನಾವು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು ಹಾಗೂ ಬಂಡಾಯವನ್ನು ಯುದ್ಧವಾಗಿ ಪರಿವರ್ತಿಸಿತು. ನಮ್ಮ ಆರ್ತನಾದಗಳ ಮೂಲಕ ಇನ್ನು ಬಂದೂಕುಗಳನ್ನು ಎದುರಿಸುವುದು ಸಾಧ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News