×
Ad

ಮನಪಾ ಒಳಚರಂಡಿ ಕಾಮಗಾರಿಯ ಪೈಪ್ ಕಳವು

Update: 2021-03-17 21:43 IST

ಮಂಗಳೂರು, ಮಾ.17: ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ಕಾಮಗಾರಿ ನಿರ್ವಹಿಸಲೆಂದು ಇರಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಪೈಪ್‌ಗಳು ಕಳವಾದ ಘಟನೆ ನಡೆದಿದೆ.

ಜೆಪ್ಪಿನಮೊಗರು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಸಂತನು ಭಟ್ಟಾಚಾರ್ಯ ಎಂಬವರು ಪಾಲಿಕೆಯ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು. ಈ ವೇಳೆ ಕಸ್ಟಂ ಕಾಲನಿಯ ಖಾಲಿ ಜಾಗದಲ್ಲಿ ಕಾಮಗಾರಿ ನಿರ್ವಹಿಸಲು ಯುಜಿಡಿ ಯುಪಿವಿಸಿ ಪೈಪ್‌ಗಳನ್ನು ಇರಿಸಲಾಗಿತ್ತು. ಮಾ.15ರಂದು ಸಂಜೆ 6ರಿಂದ ಮಾ.16ರಂದು ಮಧ್ಯಾಹ್ನ 3:30ರೊಳಗೆ ದುಷ್ಕರ್ಮಿಗಳು 1,60,943 ರೂ. ಮೌಲ್ಯದ ಪೈಪ್ ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News