ಹವಾಮಾನ ಬದಲಾವಣೆಯಿಂದ 1.03 ಕೋಟಿ ಮಂದಿ ನಿರ್ವಸಿತ
Update: 2021-03-17 23:31 IST
ಸಿಂಗಾಪುರ, ಮಾ. 17: ಪ್ರವಾಹ ಮತ್ತು ಬರ ಮುಂತಾದ ಹವಾಮಾನ ಬದಲಾವಣೆ ಸಂಬಂಧಿ ಘಟನೆಗಳಿಂದಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 1.03 ಕೋಟಿ ಮಂದಿ ನಿರ್ವಸಿತರಾಗಿದ್ದಾರೆ ಎಂದು ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಆ್ಯಂಡ್ ರೆಡ್ ಕ್ರೆಸೆಂಟ್ ಸೊಸೈಟೀಸ್ ಬುಧವಾರ ಹೇಳಿದೆ.
ಇದೇ ಅವಧಿಯಲ್ಲಿ, ಸಂಘರ್ಷದಿಂದಾಗಿ ಇನ್ನೂ ಸುಮಾರು 23 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ ಎಂದು ಅದು ಹೇಳಿದೆ. ಇದರೊಂದಿಗೆ, ಸಂಘರ್ಷಕ್ಕಿಂತಲೂ ಹೆಚ್ಚಿನ ಜನರು ಹವಾಮಾನ ಬದಲಾವಣೆಯಿಂದಾಗಿ ನಿರ್ವಸಿತರಾಗಿರುವುದು ಸಾಬೀತಾಗಿದೆ.
‘‘ಪರಿಸ್ಥಿತಿಯು ಹದಗೆಡುತ್ತಿದೆ. ಹವಾಮಾನ ಬದಲಾವಣೆಯು ಬಡತನ, ಸಂಘರ್ಷ ಮತ್ತು ರಾಜಕೀಯ ಅಸ್ಥಿರತೆ ಮುಂತಾದ ಅಂಶಗಳನ್ನು ಬಿಗಡಾಯಿಸುತ್ತಿದೆ’’ ಎಂದು ಸೊಸೈಟೀಸ್‌ನ ಏಶ್ಯ ಪೆಸಿಫಿಕ್ ವಲಸೆ ಮತ್ತು ನಿರ್ವಸತಿ ಸಂಯೋಜಕಿ ಹೆಲನ್ ಬ್ರಂಟ್ ಹೇಳಿದರು.