ಕಾಣಿಕೆ ಡಬ್ಬಿಯಿಂದ ನಗದು ಕಳವು
Update: 2021-03-18 21:44 IST
ಮಂಗಳೂರು, ಮಾ.18: ಪಚ್ಚನಾಡಿ ಗ್ರಾಮದ ಪದವಿನಂಗಡಿ ಕೊರಗಜ್ಜ ಕಟ್ಟೆಯಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಯ ಬೀಗ ಮುರಿದು ಅದರಲ್ಲಿದ್ದ ಸುಮಾರು 50 ಸಾವಿರ ರೂ. ಕಳವುಗೈದ ಘಟನೆ ವರದಿಯಾಗಿದೆ.
ಬುಧವಾರ ರಾತ್ರಿ 7:30ರಿಂದ ಗುರುವಾರ ಬೆಳಗ್ಗೆ 10 ಗಂಟೆ ನಡುವೆ ಕಳ್ಳತನ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.