ಭಟ್ಕಳ: ತಲೆ ಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ 26 ವರ್ಷಗಳ ಬಳಿಕ ಬಂಧನ
ಭಟ್ಕಳ: ತಾಲೂಕಿನ ಮುರುಡೇಶ್ವರ ನ್ಯಾಶನಲ್ ಹೈಸ್ಕೂಲ್ ಬಳಿ 1995 ರಲ್ಲಿ ನಡೆದಿದೆ ಎನ್ನಲಾದ ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಬೇಕಾಗಿದ್ದ ಆರೋಪಿಯನ್ನು 26 ವರ್ಷಗಳ ಬಳಿಕ ಗುರುವಾರದಂದು ಪತ್ತೆ ಹಚ್ಚಿದ ಮುರುಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳದ ಮದಿನಾ ಕಾಲೋನಿ ನಿವಾಸಿ ನಝೀರ್ ಅಹ್ಮದ್(48) ಬಂಧಿತ ಆರೋಪಿಯಾಗಿದ್ದು, ಈತ ಪ್ರಕರಣದ ನಂತರ ಮುಂಬೈ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಭಟ್ಕಳ ಪೊಲೀಸ್ ವೃತ್ತ ನಿರೀಕ್ಷ ದಿವಾಕರ ಪಿ.ಎಮ್ರವರ ನೇತೃತ್ವದಲ್ಲಿ ಮುರ್ಡೇಶ್ವರ ಪಿ.ಎಸ್.ಐ ರವೀಂದ್ರ ಬಿರಾದಾರ, ಸಿಬ್ಬಂದಿಗಳಾದ ಮಂಜುನಾಥ ಗೌಡರ ಎ.ಎಸ್.ಐ, ಭಟ್ಕಳ ಗ್ರಾಮೀಣ ಮೊಲೀಸ್ ಠಾಣೆ, ನಾಗರಾಜ ಮೊಗೇರ ಸಿ.ಹೆಚ್.ಸಿ, ಭಟ್ಕಳ ಶಹರ ಪೊಲೀಸ್ ಠಾಣೆ, ಲಕ್ಷಣ ಪೂಜಾರಿ, ಸಿ.ಪಿ.ಸಿ, ಮುರ್ಡೇಶ್ವರ ಪೊಲೀಸ್ ಠಾಣೆ ಇವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.