ಕೋವಿಡ್ ಲಸಿಕೆ ಪಡೆಯಲು ಮಸೀದಿಗಳಲ್ಲಿ ಜನ ಜಾಗೃತಿ ಮೂಡಿಸಲು ವಕ್ಫ್ ಸಮಿತಿ ಮನವಿ

Update: 2021-03-18 18:27 GMT

ಮಂಗಳೂರು, ಮಾ.18: ದ.ಕ. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಲಸಿಕೆ ಪಡೆಯುವ ಬಗ್ಗೆ ಜನ ಜಾಗೃತಿಯನ್ನು ಮೂಡಿಸಲು ವಕ್ಫ್ ಸಮಿತಿ ಮನವಿ ಮಾಡಿದೆ.
ಕೊರೋನ ಸೋಂಕು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದ್ದು, ಈ ವಿಕೋಪದ ನಿಯಂತ್ರಣಕ್ಕಾಗಿ ಸರಕಾರವು ಮುಂಜಾಗ್ರತಾ ಕ್ರಮ ಅನುಸರಿಸುವುದರೊಂದಿಗೆ, ಈಗಾಗಲೇ 3ನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಅನುಷ್ಠಾನಗೊಂಡಿದೆ. 45ರಿಂದ 59 ವಯಸ್ಸಿನವರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಲಸಿಕೆ ಸ್ವೀಕರಿಸಬಹುದು.

ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಜುಮಾ ನಮಾಝಿನ ನಂತರ ಈ ವಿಷಯವನ್ನು ಪ್ರಚುರ ಪಡಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News